ಬಾಗಲಕೋಟೆ: 2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಬಿಳಿಜೋಳ (ಮಾಲ್ದಂಡಿ) ಉತ್ಪನ್ನಕ್ಕೆ ಪ್ರತಿ ಕ್ವಿಂಟಲ್‌ಗೆ ₹3,421 ಹಾಗೂ ಬಿಳಿಜೋಳ (ಹೈಬ್ರಿಡ್) ಪ್ರತಿ ಕ್ವಿಂಟಲ್‌ಗೆ ₹3,371ಕ್ಕೆ ಖರೀದಿ ಮಾಡಲಾಗುತ್ತದೆ.
ಮಾರ್ಚ್ 25ರಿಂದ ನೋಂದಣಿ ಆರಂಭಗೊಳ್ಳಲಿದ್ದು, ಏ.1 ರಿಂದ ಮೇ 31ರವರೆಗೆ ಖರೀದಿ ಮಾಡಲಾಗುತ್ತದೆ. ಈ ಕೆಳಕಂಡ ಪ್ರದೇಶಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಬಾಗಲಕೋಟೆಯಲ್ಲಿ ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ. ಮುಖ್ಯ ಮಾರುಕಟ್ಟೆ ಬಾಗಲಕೋಟೆ. ಎನ್.ಸಿದ್ದಯ್ಯ (73495 37313), ಹುನಗುಂದದಲ್ಲಿ ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ. ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ, ಸುಷ್ಮಾ ದೇವಗಿರಿ (88929 62080) ಇಳಕಲ್ಲಿನಲ್ಲಿ ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ. ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣ, ಸುಷ್ಮಾ ದೇವಗಿರಿ (88929 96080) ಬಾದಾಮಿಯಲ್ಲಿ ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ. ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ, ಅಶ್ವಿನಿ ನಾಲತವಾಡ (83104 83296).
ಗುಳೇದಗುಡ್ಡದಲ್ಲಿ ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ. ಹೊಳೆಬಸು ಶೆಟ್ಟರ್ ಗೋದಾಮು, ಅಶ್ವಿನಿ ನಾಲತವಾಡ (83104 83296), ಬೀಳಗಿಯಲ್ಲಿ ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ. ಟಿ.ಎ.ಪಿ.ಸಿ.ಎಂ.ಎಸ್. ಗೋದಾಮು ಶಶಿಧರ ಭಜಂತ್ರಿ (82172 26077), ಜಮಖಂಡಿಯಲ್ಲಿ ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ. ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ, ಕುಮಾರ (96862 58484).
ರಬಕವಿ-ಬನಹಟ್ಟಿಯಲ್ಲಿ ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ. ತೇರದಾಳ ರಸ್ತೆ, ಹನಗಂಡಿ, ಕುಮಾರ (96862 58484), ಮುಧೋಳದಲ್ಲಿ ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ. ಮುಧೋಳ, ಕುಮಾರ (96862 58484).
ರೈತರು ಫ್ರೂಟ್ಸ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಹಾಗೂ ಈ-ಕೆವೈಸಿ ಮಾಡಿ ನೋಂದಣಿ ಮಾಡಬಹುದು. ಮಾಹಿತಿಗೆ ಕೆ.ಎಫ್.ಸಿ.ಎಸ್.ಸಿ. (94484 96010) ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.