ADVERTISEMENT

ಬೀಳಗಿ: ಶಿಕ್ಷಣ, ಸಹಕಾರ ಸಂಸ್ಥೆ ಕಟ್ಟಿದ ಖೋತ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 6:37 IST
Last Updated 14 ಫೆಬ್ರುವರಿ 2026, 6:37 IST
ಬಸವರಾಜ ಖೋತ
ಬಸವರಾಜ ಖೋತ   

ಬೀಳಗಿ: ಶೈಕ್ಷಣಿಕ ಸಂಸ್ಥೆ, ಸಹಕಾರ ಸಂಘ ಸ್ಥಾಪನೆ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಬಸವರಾಜ ಖೋತ ದಣಿವಿಲ್ಲದೇ ದುಡಿಯುತ್ತಿದ್ದಾರೆ. ಆ ಮೂಲಕ ನೂರಾರು ಕುಟುಂಬಗಳಿಗೆ ಉದ್ಯೋಗ ನೀಡಿದ್ದಾರೆ.

ಅನಗವಾಡಿ ಬನಶಂಕರಿದೇವಿ ವಿದ್ಯಾ ಸಂಸ್ಥೆ, ಕುಂದರಗಿ ರಾಮಲಿಂಗೇಶ್ವರ ವಿದ್ಯಾವರ್ಧಕ ಸಂಘ ಹಾಗೂ ರಾಮಲಿಂಗೇಶ್ವರ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಶಿಕ್ಷಣ, ಸಹಕಾರ ಹಾಗೂ ಸಮಾಜ ಸೇವೆಯನ್ನು ಒಟ್ಟಿಗೆ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ.

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಮೊದಲಾದ ಕ್ಷೇತ್ರಗಳ ತೊಡಗಿಸಿಕೊಂಡಿದ್ದಾರೆ. ಉದ್ಯಮಿಯಾಗಿಯೂ ಯಶಸ್ವಿಕಂಡಿದ್ದಾರೆ. ಅನಗವಾಡಿ, ಕುಂದರಗಿ ಮುಂತಾದ ಕಡೆಗಳಲ್ಲಿ ಶಾಲಾ, ಕಾಲೇಜು ನಡೆಸುತ್ತಿದ್ದಾರೆ. ಕುಂದರಗಿಯ ಪ್ರಧಾನ ಕಚೇರಿ ಸೇರಿದಂತೆ ರಾಮಲಿಂಗೇಶ್ವರ ಪತ್ತಿನ ಸಹಕಾರಿ ಸಂಘ ವಿವಿಧೆಡೆ 25 ಶಾಖೆಗಳನ್ನು ಹೊಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.