ADVERTISEMENT

ಬಯಲಾಟ ಅಕಾಡೆಮಿ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟ ಬಾಗಲಕೋಟೆ: ಕರ್ನಾಟಕ ಬಯಲಾ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 9:30 IST
Last Updated 16 ಸೆಪ್ಟೆಂಬರ್ 2022, 9:30 IST
   

ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿಯು 2021 ಹಾಗೂ 2022ನೇ ಸಾಲಿನ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಅಜಿತ್‌ ಬಸಾಪುರ, ಗೌರವ ಪ್ರಶಸ್ತಿಯು ₹50 ಸಾವಿರ ನಗದು, ವಾರ್ಷಿಕ ಪ್ರಶಸ್ತಿ ₹25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ. ಬಾಗಲಕೋಟೆ ಅಥವಾ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಅಕಾಡೆಮಿಗೆ ವಾರ್ಷಿಕ ಕೇವಲ ₹30 ಲಕ್ಷ ಅನುದಾನವಿದೆ. ₹1 ಕೋಟಿಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಕಾರ್ಯದರ್ಶಿ ಕರ್ಣಕುಮಾರ ಇದ್ದರು.

ADVERTISEMENT

2021ರ ಗೌರವ ಪ್ರಶಸ್ತಿ: ಅನಸೂಯಾ ವಡ್ಡರ, ಶ್ರೀಕೃಷ್ಣ ಪಾರಿಜಾತ (ವಿಜಯಪುರ), ನರಸಪ್ಪ ಶಿರಗುಪ್ಪಿ, ಬಯಲಾಟ (ಬೆಳಗಾವಿ), ವೀರಪ್ಪ ಬಿಸರಳ್ಳಿ, ದೊಡ್ಡಾಟ (ಕೊಪ್ಪಳ), ಎಸ್‌.ಎ. ಕೃಷ್ಣಯ್ಯ, ತೊಗಲು ಗೊಂಬೆಯಾಟ (ಉಡುಪಿ), ಗೋವಿಂದಪ್ಪ ತಳವಾರ, ದೊಡ್ಡಾಟ (ಹಾವೇರಿ)

2021ರ ವಾರ್ಷಿಕ ಪ್ರಶಸ್ತಿ: ಸುಂದ್ರವ್ವ ಮೇತ್ರಿ, ಶ್ರೀಕೃಷ್ಣ ಪಾರಿಜಾತ (ಬಾಗಲಕೋಟೆ), ಫಕ್ಕಿರಪ್ಪ ಗೌರಕ್ಕನವರ, ಬಯಲಾಟ (ಹಾವೇರಿ), ಚಂದ್ರಶೇಖರ ಮೇಲಿನಮನಿ, ಶ್ರೀಕೃಷ್ಣ ಪಾರಿಜಾತ (ವಿಜಯಪುರ), ದುಂಡಪ್ಪ ಗುಡ್ಲಾ, ಬಯಲಾಟ (ಕಲಬುರಗಿ), ಚಂದ್ರಶೇಖರ ಗುರಯ್ಯನವರ, ದೊಡ್ಡಾಟ (ಧಾರವಾಡ), ಸುಶೀಲಾ ಮಾದರ, ಸಣ್ಣಾಟ (ಬೆಳಗಾವಿ), ವೆಂಕೋಬ ಗೋನಾವರ, ದೊಡ್ಡಾಟ (ರಾಯಚೂರ), ಎಸ್‌.ಚಂದ್ರಪ್ಪ, ದೊಡ್ಡಾಟ (ದಾವಣಗೆರೆ), ಎಂ.ಆರ್‌. ವಿಜಯ, ಸೂತ್ರದ ಗೊಂಬೆಯಾಟ, (ಬೆಂಗಳೂರು), ದಾನಪ್ಪ ಹಡಪದ, ದೊಡ್ಡಾಟ (ಗದಗ).

2022ರ ಗೌರವ ಪ್ರಶಸ್ತಿ: ಕೆ. ಮೌನಾಚಾರಿ, ಬಯಲಾಟ (ಬಳ್ಳಾರಿ), ಸುರೇಂದ್ರ ಹುಲ್ಲಂಬಿ, ಸಣ್ಣಾಟ (ಧಾರವಾಡ), ಮಲ್ಲೇಶಯ್ಯ ಶತಕಂಠ, ದೊಡ್ಡಾಟ (ತುಮಕೂರು), ಚಂದ್ರಮ್ಮ, ತೊಗಲು ಗೊಂಬೆಯಾಟ (ಮಂಡ್ಯ), ಅಶೋಕ ಸುತಾರ, ದೊಡ್ಡಾಟ (ಗದಗ)

2022ರ ವಾರ್ಷಿಕ ಪ್ರಶಸ್ತಿ: ಮಲ್ಲಪ್ಪ ಗಣಿ, ಸಣ್ಣಾಟ (ಬಾಗಲಕೋಟೆ), ಫಕ್ಕೀರೇಶ ಬಿಸಟ್ಟಿ, ದೊಡ್ಡಾಟ (ಹಾವೇರಿ), ನಾಗರತ್ನಮ್ಮ, ಬಯಲಾಟ (ವಿಜಯನಗರ), ಕೆಂಪಣ್ಣ ಚೌಗಲಾ, ಶ್ರೀಕೃಷ್ಣ ಪಾರಿಜಾತ (ಬೆಳಗಾವಿ) ರಾಮಚಂದ್ರ ಕಟ್ಟಿಮನಿ, ದೊಡ್ಡಾಟ (ಯಾದಗಿರಿ), ಅಂಬುಜಮ್ಮ ಸುಂಕಣ್ಣ, ಬಯಲಾಟ (ಬಳ್ಳಾರಿ), ಕೆ.ಪಿ. ಭೂತಯ್ಯ, ದೊಡ್ಡಾಟ, (ಚಿತ್ರದುರ್ಗ), ಜಿ. ರಾಮಪ್ರಭು, ಬಯಲಾಟ (ದಾವಣಗೆರೆ), ಬಿ. ರತ್ಮಮ್ಮ ಸೋಗಿ, ದೊಡ್ಡಾಟ (ಶಿವಮೊಗ್ಗ), ಫಕ್ಕೀರಪ್ಪ ನೆರ್ತಿ, ದೊಡ್ಡಾಟ (ಧಾರವಾಡ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.