
ಮುಧೋಳ: ಬಾಗಲಕೋಟೆ ಬಿವಿವಿ ಸಂಘದ ಬಸವೇಶ್ವರ ಅಂತರರಾಷ್ಟ್ರೀಯ ಪಬ್ಲಿಕ್ ಸ್ಕೂಲ್ (ಬಿಪ್ಸ್) ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನಗರದಲ್ಲಿ ಬುಧವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.
ಶ್ರೀಶೈಲಂ ಪೀಠದ ಚೆನ್ನಸಿದ್ಧರಾಮ ಪಾಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ನೂತನ ಕಟ್ಟಡವನ್ನು ಉದ್ಘಾಟಿಸುವರು, ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸುವರು, ಗೌರವ ಕಾರ್ಯದರ್ಶಿ ಮಹೇಶ ಅಥಣಿ ಹಾಗೂ ಸಂಘದ ಹೈಸ್ಕೂಲ್‍ಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಬಿಪ್ಸ್ ಸ್ಕೂಲ್ ಪ್ರಾಚಾರ್ಯ ಶಶಿಧರ ಕುಲಕರ್ಣಿ ಹಾಗೂ ಸಂಘದ ಸದಸ್ಯರು ಪಾಲ್ಗೊಳ್ಳು ವರು. ಶಾಲೆ ಪರಿಚಯ: 1.35 ಲಕ್ಷ ಚದುರಡಿ ಜಾಗೆಯಲ್ಲಿ ಮುಧೋಳ ಬಿಪ್ಸ್ ಸ್ಕೂಲ್ ನ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ.
2020 ಕೊರೊನಾ ಸಮಯದಲ್ಲಿ ಆರಂಭವಾದ ಈ ಸ್ಕೂಲ್ ನಲ್ಲಿ ಕೇವಲ 140 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದುಕೊಂಡಿದ್ದರು.
2021ರ ಹೊತ್ತಿಗೆ ಒಂದು ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ಕೊಂಡರು. 2025ರ ಸಾಲಿಗೆ 1500 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡು ದಾಖಲೆ ಸಂಖ್ಯೆ ಬರೆದಿದ್ದಾರೆ. ಒಟ್ಟು 80 ಜನ ಶಿಕ್ಷಕ ಮತ್ತು ಶಿಕ್ಷಕಿಯರಿದ್ದಾರೆ,
ಇಲ್ಲಿ ಎಲ್.ಕೆ.ಜಿ ಇಂದ ಎಸ್.ಎಸ್.ಎಲ್.ಸಿ ವರೆಗೆ ಶಿಕ್ಷಣ ನೀಡಲಾ ಗುತ್ತಿದೆ.‘ ಒಟ್ಟು 103 ತರಗತಿಗಳ ಕೊಠಡಿ ಗಳಿವೆ, ಗ್ರಂಥಾಲಯ, ವಿಜ್ಞಾನ, ಗಣಿತ ಮತ್ತು ಕಂಪ್ಯೂಟರ್ ವಿಷಯಗಳ ಪ್ರಯೋಗಾಲಯ, ನಲಿ-ಕಲಿ ಕೊಠಡಿ ಸೇರಿದಂತೆ ವಿದ್ಯಾರ್ಧಿಗಳಿಗೆ ಬೇಕಾಗುವ ಎಲ್ಲ ರೀತಿಯ ಸೌಲಭ್ಯವನ್ನು ಹೊಂದಿದೆ.
ಒಟ್ಟಾರೆ ಇದೊಂದು ಸುಸಜ್ಜಿತ ಮತ್ತು ಆಕರ್ಷಕ ನೂತನ ಕಟ್ಟಡ ಇದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.