
ರಬಕವಿ ಬನಹಟ್ಟಿ: ಇಲ್ಲಿನ ಗುಡ್ಡದ ಲಕ್ಷ್ಮಿದೇವಿಯ ಜಾತ್ರೆ ಶುಕ್ರವಾರ ಸಡಗರದಿಂದ ನಡೆಯಿತು.
ಜಾತ್ರೆ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ನಂತರ ಅಭಿಷೇಕ ನಡೆಯಿತು. ಲಕ್ಷ್ಮಿದೇವಿಗೆ ಬುತ್ತಿ ಪೂಜೆ ಮಾಡಲಾಯಿತು.
ನಂತರ ಲಕ್ಷ್ಮಿ ದೇವಿಯ ಪಲ್ಲಕ್ಕಿ ಉತ್ಸವ, ಕಳಸದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ನಡೆಯಿತು. ದೇವಸ್ಥಾನದ ಆವರಣದಲ್ಲಿ 500ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನಡೆಯಿತು.
ನಗರದ ಮುಖಂಡರು, ರೈತ ಸಮುದಾಯದ ಮುಖಂಡರು, ನೂರಾರು ಮಹಿಳೆಯರು ಸೇರಿ ಸಾಮೂಹಿಕ ಮಂಗಳಾರತಿ ನೆರವೇರಿಸಿದರು. ನಂತರ ಪ್ರಸಾದ ಸೇವೆ ಆರಂಭಗೊಂಡಿತು.
ಸಿದ್ದನಗೌಡ ಪಾಟೀಲ, ರಾಜು ಗುಂಡಿ, ಜಯವಂತ ಮಿಳ್ಳಿ, ಕಾಡಪ್ಪ ಗುಂಡಿ, ಧರೆಪ್ಪ ಪಾಟೀಲ, ರಮೇಶ ಮಹೀಷವಾಡಗಿ, ಭೀಮಶಿ ಪಾಟೀಲ, ಮಹಾದೇವ ಗುಡ್ಡಕಾರ, ಮಹಾದೇವ ಮಡ್ಡಿ, ಮಾನಿಂಗ ಬೆಳಗಲಿ, ಅಕ್ಕಿಮಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.