
ಪ್ರಜಾವಾಣಿ ವಾರ್ತೆ
ಹುನಗುಂದ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರ ರೈತ ಸಮುದಾಯ ಎಳ್ಳ ಅಮಾವಾಸ್ಯೆಯನ್ನು ಸಡಗರದಿಂದ ಆಚರಿಸಿತು.
ಎತ್ತಿನ ಬಂಡಿ, ಟ್ರಾಕ್ಟರ್, ಟಂಟಂ, ಆಟೊ, ಬೈಕ್‌ಗಳಲ್ಲಿ ಕುಳಿತು ರೈತ ಸಮೂಹ ಕುಟುಂಬ ಸಮೇತ ಹೊಲಗಳಿಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು. ರೈತರು ಮೊದಲಿಗೆ ತಮ್ಮ ಜಮೀನಿನ ಬನ್ನಿ ಮರಕ್ಕೆ ಪೂಜಿಸಿದ ನಂತರ ಮಹಿಳೆಯರು, ಮಕ್ಕಳು ‘ಹುಲ್ಲುಲ್ಲಿಗೋ, ಚೆಲಾಂಬ್ರಿಗೋ’ ಎನ್ನುತ್ತಾ ಹಿಂಗಾರು ಬೆಳೆಗಳಿಗೆ ಚರಗ ಚೆಲ್ಲುವ ಮೂಲಕ ಭೂತಾಯಿಗೆ ನಮಿಸಿದರು.
ರೈತರು ತಮ್ಮೊಂದಿಗೆ ಇತರರನ್ನು ಆಹ್ವಾನಿಸಿ ಹೊಲದ ಒಂದು ಭಾಗದಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಭೋಜನ ಸವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.