ADVERTISEMENT

ಬಾದಾಮಿ | ಚಾಲುಕ್ಯರ ಆಡಳಿತ ವಂಶ ಪರಂಪರೆಯಾಗಿತ್ತು: ಎಲ್.ಪಿ. ಮಾರುತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 5:58 IST
Last Updated 21 ಜನವರಿ 2026, 5:58 IST
ಬಾದಾಮಿಯಲ್ಲಿ ಚಾಲುಕ್ಯ ಉತ್ಸವ-2026ರ ಅಂಗವಾಗಿ ಎಸ್.ಬಿ. ಮಮದಾಪೂರ ಪದವಿ ಕಾಲೇಜಿನಲ್ಲಿ ನಡೆದ ಚಾಲುಕ್ಯರ ಇತಿಹಾಸ ಗೋಷ್ಠಿಯಲ್ಲಿ ಸಂಶೋಧಕ ಶ್ರೀನಿವಾಸ ಪಾಡಿಗಾರ ರಚಿಸಿದ ‘ ಬಾದಾಮಿ ಚಾಲುಕ್ಯರು ’ ಕುರಿತು ಬರೆದ ಪುಸ್ತಕವನ್ನು ಡಿಡಿಪಿಐ ಎ.ಸಿ. ಮನ್ನಿಕೇರಿ ಬಿಡುಗಡೆ ಮಾಡಿದರು
ಬಾದಾಮಿಯಲ್ಲಿ ಚಾಲುಕ್ಯ ಉತ್ಸವ-2026ರ ಅಂಗವಾಗಿ ಎಸ್.ಬಿ. ಮಮದಾಪೂರ ಪದವಿ ಕಾಲೇಜಿನಲ್ಲಿ ನಡೆದ ಚಾಲುಕ್ಯರ ಇತಿಹಾಸ ಗೋಷ್ಠಿಯಲ್ಲಿ ಸಂಶೋಧಕ ಶ್ರೀನಿವಾಸ ಪಾಡಿಗಾರ ರಚಿಸಿದ ‘ ಬಾದಾಮಿ ಚಾಲುಕ್ಯರು ’ ಕುರಿತು ಬರೆದ ಪುಸ್ತಕವನ್ನು ಡಿಡಿಪಿಐ ಎ.ಸಿ. ಮನ್ನಿಕೇರಿ ಬಿಡುಗಡೆ ಮಾಡಿದರು   

ಬಾದಾಮಿ: ಚಾಲುಕ್ಯ ದೊರೆಗಳ ಆಡಳಿತವು ವಂಶಪರಂಪರೆಯಾಗಿತ್ತು. ಯುವರಾಜರು ಸ್ಥಳೀಯ ಆಡಳಿತವನ್ನು ನೋಡಿಕೊಳ್ಳುವುದರ ಜೊತೆಗೆ ತಂದೆಯ ಜೊತೆಗೆ ಯುದ್ಧಕ್ಕೆ ಹೋಗುತ್ತಿದ್ದರು ಎಂದು ಧಾರವಾಡ ಕರ್ನಾಟಕ ವಿವಿ ಇತಿಹಾಸ ಮತ್ತು ಪ್ರಾಚ್ಯವಸ್ತು ವಿಭಾಗದ ಮುಖ್ಯಸ್ಥ ಎಲ್.ಪಿ. ಮಾರುತಿ ಹೇಳಿದರು.

ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಎಸ್.ಬಿ. ಮಮದಾಪೂರ ಪದವಿ ಕಾಲೇಜಿನಲ್ಲಿ ಮಂಗಳವಾರ ಚಾಲುಕ್ಯ ಉತ್ಸವ-2026 ರ ಅಂಗವಾಗಿ ನಡೆದ ಚಾಲುಕ್ಯರ ಇತಿಹಾಸ ಗೋಷ್ಠಿಯಲ್ಲಿ ಅವರು ‘ ಬಾದಾಮಿ ಚಾಲುಕ್ಯರ ಅಡಳಿತ ಕುರಿತು ಉಪನ್ಯಾಸ ನೀಡಿದರು.

‘ಚಾಲುಕ್ಯರು ಮೊದಲು ಗುಹಾಂತರ ದೇವಾಲಯಗಳನ್ನು ನಂತರ ರಾಚನಿಕ ದೇವಾಲಯಗಳನ್ನು ರೂಪಿಸಿದರು. ದ್ರಾವಿಡ, ನಾಗರ, ವೇಸರ ಮತ್ತು ಕದಂಬ ಶೈಲಿಯ ದೇವಾಲಯಗಳಲ್ಲಿ ಪರಧರ್ಮ ಸಹಿಷ್ಣುತೆ ಸಾರುವ ಮೂರ್ತಿ ಶಿಲ್ಪಗಳನ್ನು ಕೆತ್ತನೆ ಮಾಡಿದರು ’ ಎಂದು ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಆರ್.ಎಂ. ಷಡಕ್ಷರಯ್ಯ ‘ ಬಾದಾಮಿ ಚಾಲುಕ್ಯರ ದೇವಾಲಯಗಳು ಮತ್ತು ವಾಸ್ತುಶಿಲ್ಪ ’ ಕುರಿತು ಉಪನ್ಯಾಸ ನೀಡಿದರು.

ADVERTISEMENT

ನಿವೃತ್ತ ಪ್ರಾಧ್ಯಾಪಕ ರಾಜಶೇಖರ್ ಬಸುಪಟ್ಟದ ಅಧ್ಯಕ್ಷತೆ ವಹಿಸಿ ಚಾಲುಕ್ಯರ ರಾಜರ ಬಗ್ಗೆ ತಿಳಿಸಿದರು. ವಿ.ಎಂ. ಜೋಶಿ ಚಾಲುಕ್ಯರ ಕುರಿತು ಆಶಯ ನುಡಿಗಳನ್ನು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಶ್ರೀನಿವಾಸ ಪಾಡಿಗಾರ ರಚಿಸಿದ ಬಾಗಲಕೋಟೆ ಜಿಲ್ಲಾ ಆಡಳಿತ ಪ್ರಕಟಿಸಿದ ‘ಬಾದಾಮಿ ಚಾಲುಕ್ಯರು ’ ಕುರಿತು ಕಿರು ಹೊತ್ತಿಗೆಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ. ಮನ್ನಿಕೇರಿ ಬಿಡುಗಡೆ ಮಾಡಿದರು. ಬಸಮ್ಮ ನರಸಾಫುರ ನಿರೂಪಿಸಿದರು. ಆರ್.ಬಿ. ಸಂಕದಾಳ ಸ್ವಾಗತಿಸಿದರು.

ಗೋಷ್ಠಿಯಲ್ಲಿ ತಾಲ್ಲೂಕಿನ ಪ್ರೌಢ ಶಾಲೆಗಳ ಕನ್ನಡ ಮತ್ತು ಇತಿಹಾಸ ಶಿಕ್ಷಕರು ಪಾಲ್ಗೊಂಡಿದ್ದರು.

ಕಿರು ಹೊತ್ತಿಗೆ ವಿವರ :

ಕೃತಿ : ಬಾದಾಮಿ ಚಾಲುಕ್ಯರು (ರಾಜಕೀಯ ಮತ್ತು ಸಾಂಸ್ಕೃತಿ ಇತಿಹಾಸ 543-757)

ಕೃತಿಕಾರ : ಶ್ರೀನಿವಾಸ ಪಾಡಿಗಾರ

ಹಕ್ಕುಗಳು : ಚಾಲುಕ್ಯ ಉತ್ಸವ ಸಮಿತಿ ಬಾಗಲಕೋಟೆ

ಮುದ್ರಣ : ಸುಹಾಸ್ ಗ್ರಾಫಿಕ್ ಬೆಂಗಳೂರು

ಪುಟ: 28, ಬೆಲೆ: ₹50

ಚಾಲುಕ್ಯ ಉತ್ಸವದ ಅಂಗವಾಗಿ ಹಮ್ಮಿಕೊಂಡ ಚಿತ್ರಕಲಾ ಶಿಬಿರದಲ್ಲಿ ಕಲಾವಿದರು ಚಾಲುಕ್ಯರ ಸ್ಮಾರಕಗಳನ್ನು ಚಿತ್ರಿಸಿದರು.
ಚಾಲುಕ್ಯ ಉತ್ಸವದ ಅಂಗವಾಗಿ ಬಾದಾಮಿಯಲ್ಲಿ ಬೆಟ್ಟ ಹತ್ತುವ ತರಬೇತಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.