ADVERTISEMENT

ಸಮಸ್ಯೆಗಳಿಗೆ ಶಿಕ್ಷಣ ಒಂದೇ ಪರಿಹಾರ: ಯಶುಪಾಲ ಬೋರೆ

ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಅಂಬೇಡ್ಕರ್ ಆಶಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 16:23 IST
Last Updated 27 ನವೆಂಬರ್ 2020, 16:23 IST
ಮುಧೋಳದ ರನ್ನ ಗ್ರಂಥಾಲಯ ಸಭಾ ಭವನದಲ್ಲಿ ಭೀಮ ಆರ್ಮಿ ಸಂಘಟನೆ ಆಯೋಜಿಸಿದ ಸಂವಿಧಾನ ಓದು ಅಭಿಯಾನದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು
ಮುಧೋಳದ ರನ್ನ ಗ್ರಂಥಾಲಯ ಸಭಾ ಭವನದಲ್ಲಿ ಭೀಮ ಆರ್ಮಿ ಸಂಘಟನೆ ಆಯೋಜಿಸಿದ ಸಂವಿಧಾನ ಓದು ಅಭಿಯಾನದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು   

ಮುಧೋಳ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಗಲಿರುಳು ಶ್ರಮಪಟ್ಟು ರಚಿಸಿದ ಸಂವಿಧಾನವು ವಿಶ್ವಕ್ಕೆ ಮಾದರಿಯಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು ಎಂಬುವುದು ಅವರ ಆಶಯವಾಗಿತ್ತು ಎಂದು ಭೀಮ್ ಆರ್ಮಿ ರಾಜ್ಯ ಘಟಕದ ಅಧ್ಯಕ್ಷ ಯಶುಪಾಲ ಬೋರೆ ಹೇಳಿದರು.

ಅವರು ನಗರದ ರನ್ನ ಗ್ರಂಥಾಲಯದ ಸಭಾ ಭವನದಲ್ಲಿ ತಾಲ್ಲೂಕು ಭೀಮ್ ಆರ್ಮಿ ಸಂಘಟನೆ ಆಯೋಜಿಸಿದ್ದ ಸಂವಿಧಾನ ದಿನಾಚರಣೆ, ಸಂವಿಧಾನ ಓದು ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿರುವ ಎಲ್ಲ ಸಮಸ್ಯೆಗಳಿಗೆ ಶಿಕ್ಷಣ ಒಂದೇ ಪರಿಹಾರ ಎಂದು ಹೇಳಿದರು.

ಭೀಮವಾದ ರಾಜ್ಯ ಸಂಘಟನಾ ಸಂಚಾಲಕ ಯಮನಪ್ಪ ಗುಣದಾಳ ಮಾತನಾಡಿ, ಮಹಾ ಜ್ಞಾನಿಗಳಾಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮನುವಾದಿಗಳ ನೀಡಿದ ತೊಂದರೆಗಳನ್ನು ಮೆಟ್ಟಿ ನಿಂತು ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನವೇ ನಮ್ಮ ಪವಿತ್ರ ಗ್ರಂಥ ಎಂದು ಹೇಳಿದರು

ADVERTISEMENT

ತಹಶೀಲ್ದಾರ್ ಎಸ್.ಬಿ.ಬಾಡಗಿ, ಸಿಪಿಐ ಎಚ್.ಆರ್, ಪಾಟೀಲ, ಪಿ.ಎಸ್.ಐ.ಮಲ್ಲಿಕಾರ್ಜುನ ಬಿರಾದಾರ, ಸಮಾಜ ಕಲ್ಯಾಣಾಧಿಕಾರಿ ಮೋಹನ ಕೊರಡ್ಡಿ, ಮುಖಂಡರಾದ ಕೃಷ್ಣಪ್ಪ ಮಾದರ, ಉಪನ್ಯಾಸಕ ಎಸ್.ಎನ್. ಪಡಸಲಗಿ, ಪತ್ರಕರ್ತ ಉದಯ ಕುಲಕರ್ಣಿ ಮಾತನಾಡಿದರು.

ವೇದಿಕೆಯ ಮೇಲೆ ಜಿಲ್ಲಾ ಪಂಚಾಯ್ತಿ ಎಇಇ. ಲಕ್ಷ್ಮಣ ಜೋಗಿ, ತಾಲ್ಲೂಕು ಪಂಚಾಯ್ತಿ ಇಒ ಕಿರಣ ಘೋರ್ಪಡೆ, ಪತ್ರಕರ್ತ ಅಶೋಕ ಕುಲಕರ್ಣಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ ಮಲಘಾಣ, ಬಸವಂತ ಕಾಂಬಳೆ, ಈರಪ್ಪಾ ಹಂಚಿನಾಳ, ಯಲ್ಲಪ್ಪ ಹೆಗಡೆ, ಮಾನಿಂಗ ಬಂಡಿ, ರವಿ ಕಾಂಬಳೆ, ಮುತ್ತಣ್ಣ ಮೇತ್ರಿ, ಭೀಮರಾವ ಕಾಳವ್ವಗೋಳ, ಪ್ರಕಾಶ ಮಾಂಗ, ಮಹೇಶ ಹುಗ್ಗಿ, ಹಣಮಂತ ಮಾದರ ದುರ್ಗವ್ವಾ ಮೇತ್ರಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಿ.ಎಂ. ಪದಕ ಪಡೆದ ಪಿ.ಎಸ್.ಐ. ಮಲ್ಲಿಕಾರ್ಜುನ ಬಿರಾದಾರ. ಪಿಎಸ್ಐ. ಪರೀಕ್ಷೆಯಲ್ಲಿ ಆಯ್ಕೆಯಾದ ಕಿರಣ ಮಾರುತಿ ಸತ್ತಿಗೇರಿ, ಯಶುಪಾಲ ಬೋರೆ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಅಧ್ಯಕ್ಷ ಲವ್ಹಿತ ಮೇತ್ರಿ ಸ್ವಾಗತಿಸಿದರು. ಸುನೀಲ ಕಂಬೋಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಅನೀಲ ಬರಗಿ ನಿರೂಪಿಸಿದರು, ರಾಕೇಶ ಮೇತ್ರಿ ಪ್ರಮಾಣ ವಚನ ಬೋಧಿಸಿದರು. ಶೇಖರ ಕಾಂಬಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.