ADVERTISEMENT

Video | ಗ್ರಾಮಾರೋಗ್ಯ – ಬಾಗಲಕೋಟೆಯಲ್ಲಿ ಮರಣಶಯ್ಯೆಯಲ್ಲಿ ಗ್ರಾಮೀಣ ಆರೋಗ್ಯ

​ಪ್ರಜಾವಾಣಿ ವಾರ್ತೆ
Published 31 ಮೇ 2021, 1:04 IST
Last Updated 31 ಮೇ 2021, 1:04 IST

ಬಾಗಲಕೋಟೆ ನಗರದ ಬಗ್ಗೆ ಇತ್ತೀಚೆಗೊಂದು ತಮಾಷೆ ಮಾತು ಚಾಲ್ತಿಯಲ್ಲಿದೆ. ಹಳೆಯ ಊರಿನ ಯಾವುದೇ ಗಲ್ಲಿಯಲ್ಲಿ ನಿಂತು ನೀವೊಂದು ಕಲ್ಲು ಎಸೆದರೂ ಅದು ಯಾವುದಾದರೂ ಆಸ್ಪತ್ರೆಯ ಕಟ್ಟಡದ ಮೇಲೆ ಬೀಳುತ್ತದೆ.. ಹೆಜ್ಜೆಗೊಂದು ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಂ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿರುವ ಕಾರಣಕ್ಕೆ ಈ ಊರು ಕೃಷ್ಣಾ ತೀರದ ಮೆಡಿಕಲ್ ಹಬ್  ಎಂಬ ಅಭಿದಾನ ಪಡೆದಿತ್ತು. ಅದನ್ನು ಈ ಸೋಂಕು ಮಣ್ಣು ಪಾಲಾಗಿಸಿದೆ. ಸೋಂಕಿನ ರೂಪದಲ್ಲಿ ಜವರಾಯ ಮಾಡುತ್ತಿರುವ ಆರ್ಭಟಕ್ಕೆ ಜಿಲ್ಲೆಯ ಗ್ರಾಮೀಣರು ತತ್ತರಿಸಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ದೇವನಾಳದಲ್ಲಿ ಬೆಳಗಾವಿ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿ ಬಂದಿದ್ದ ಶಿಕ್ಷಕಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿರುವುದೇ ಸಾಕ್ಷಿ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೊರೊನಾ ವಾಸ್ತವ ಚಿತ್ರಣ ಅರಿಯಲು ’ಪ್ರಜಾವಾಣಿ‘ ತಂಡ ಸಂಚರಿಸಿತು. ಅಲ್ಲಿ ಕಂಡ ವಿವರಗಳು ಇಲ್ಲಿವೆ ನೋಡಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.