ADVERTISEMENT

ಪ್ರಾಚೀನ ಮಾನವ ವಸತಿ ಸ್ಥಳ ಪತ್ತೆ: ಕೋಟೆಕಲ್‌ ಗುಡ್ಡಕ್ಕೆ ಸಂಶೋಧಕರ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಮೇ 2025, 15:38 IST
Last Updated 10 ಮೇ 2025, 15:38 IST
ಗುಳೇದಗುಡ್ಡ ತಾಲ್ಲೂಕಿನ ಕೋಟೆಕಲ್ ಗ್ರಾಮದ ಗುಡ್ಡದ ಮೇಲಿರುವ ಪ್ರಾಚೀನ ಜನವಸತಿ ಸ್ಥಳ
ಗುಳೇದಗುಡ್ಡ ತಾಲ್ಲೂಕಿನ ಕೋಟೆಕಲ್ ಗ್ರಾಮದ ಗುಡ್ಡದ ಮೇಲಿರುವ ಪ್ರಾಚೀನ ಜನವಸತಿ ಸ್ಥಳ   

ಗುಳೇದಗುಡ್ಡ: ತಾಲ್ಲೂಕಿನ ಕೋಟೆಕಲ್ ಗ್ರಾಮದ 2 ಕಿ.ಮೀ. ಅಂತರದ ಗುಡ್ಡದ ನಿರ್ಜನ ಪ್ರದೇಶದಲ್ಲಿ ಹತ್ತು ಸಾವಿರ ವರ್ಷಗಳ ಹಿಂದೆ ವಾಸವಾಗಿದ್ದ ಜನವಸತಿ ನೆಲೆಗಳು ಪತ್ತೆಯಾಗಿವೆ.

ಗ್ರಾಮಸ್ಥರು ಹೇಳುವ ಪ್ರಕಾರ ಇಲ್ಲಿ ಕಲ್ಲಿನ ಕೆಲಸ ಮಾಡುವ ಕಲ್ಲುಗುಟುಕರ ಎಂಬ ಜನ ಸಮೂಹ ವಾಸವಾಗಿತ್ತು. ಕ್ರಮೇಣ ಕಾಲಕ್ಕನುಗುಣವಾಗಿ ಬದಲಾವಣೆಯಾದಂತೆ ಗುಡ್ಡ, ಬೆಟ್ಟವನ್ನು ಬಿಟ್ಟು ಗ್ರಾಮ ಸಂಸ್ಕೃತಿಗೆ ಬದಲಾದಂತೆ ಕಾಣುತ್ತದೆ. ಹೀಗಾಗಿ ಅವರು ಬಿಟ್ಟು ಬಂದ ಅವಶೇಷಗಳು, ನೆಲೆಗಳು ಇಂದಿಗೂ ಕಂಡು ಬಂದಿವೆ.

‘ಸಂಶೋಧಕರು, ಪ್ರವಾಸಿ ಮಾರ್ಗದರ್ಶಿಗಳು ಭೇಟಿ ನೀಡಿ ಅಧ್ಯಯನ ಮಾಡುತ್ತಿದ್ದಾರೆ. ಇತ್ತೀಚಿಗೆ ಅಲ್ಲಿ ಭೇಟಿ ನೀಡಿ ಅಧ್ಯಯನ ಮಾಡಲಾಗಿದೆ. ಪ್ರಾಚೀನ ಕಾಲದಲ್ಲಿ ಜನರು ವಾಸಿಸುವ ಸ್ಥಳವಾಗಿದೆ. ಹೆಚ್ಚಿನ ವಿಷಯ ಶೋಧನೆಗೆ ಪುರಾತತ್ವ ಇಲಾಖೆಯವರು ಹಾಗೂ ಇತಿಹಾಸ ತಜ್ಞರು ಅಧ್ಯಯನ ಕೈಗೊಂಡು ಸಂಶೋಧನೆ ಮಾಡಿದರೆ ನಿಜ ವಿಷಯ ಕಂಡು ಹಿಡಿಯಬಹುದಾಗಿದೆ’ ಎಂದು ಐಹೊಳೆಯ ಪ್ರವಾಸಿ ಮಾರ್ಗದರ್ಶಿ ಪರಶುರಾಮ ಗೋಡಿ ತಿಳಿಸಿದರು.

ADVERTISEMENT

‘ಕೋಟೆಕಲ್ ಗುಡ್ಡದಲ್ಲಿ ಕಂಡುಬಂದ ಪ್ರಾಚೀನ ಕಾಲದಲ್ಲಿ ಗುಡ್ಡದಲ್ಲಿ ಕೆಲಸ ಮಾಡಿ ಅಲ್ಲೆ ಇರುವುದಕ್ಕಾಗಿ ನಿರ್ಮಿಸಿಕೊಂಡ ಜನವಸತಿ ಸ್ಥಳ ಎಂಬುದು ಸತ್ಯ. ಅದರ ಕಾಲ ಮುಂತಾದ ಮಾಹಿತಿ ಅಧ್ಯಯನದ ಅವಶ್ಯಕತೆ ಇದೆ’ ಎಂದು ಕೋಟೆಕಲ್ ಗ್ರಾಮದ ಗುಂಡಪ್ಪ ಕೋಟಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.