ADVERTISEMENT

ಇಳಕಲ್: 190 ವಿದ್ಯಾರ್ಥಿಗಳ ಕಣ್ಣು ತಪಾಸಣೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 15:09 IST
Last Updated 28 ಡಿಸೆಂಬರ್ 2023, 15:09 IST
ಇಳಕಲ್‌ ರೋಟರಿ ಕ್ಲಬ್‌ನಿಂದ ಪ್ರೇರಣಾ ಪ್ರಾಥಮಿಕ ಹಾಗೂ ಬಸವಶ್ರೀ ಪ್ರೌಢಶಾಲೆಯಲ್ಲಿ ನಡೆದ ಕಣ್ಣು ತಪಾಸಣಾ ಶಿಬಿರದಲ್ಲಿ ಡಾ.ಅಭಿಜಿತ್‌ ಕಾಖಂಡಕಿ ವಿದ್ಯಾರ್ಥಿಗಳ ನೇತ್ರ ತಪಾಸಣೆ ಮಾಡಿದರು
ಇಳಕಲ್‌ ರೋಟರಿ ಕ್ಲಬ್‌ನಿಂದ ಪ್ರೇರಣಾ ಪ್ರಾಥಮಿಕ ಹಾಗೂ ಬಸವಶ್ರೀ ಪ್ರೌಢಶಾಲೆಯಲ್ಲಿ ನಡೆದ ಕಣ್ಣು ತಪಾಸಣಾ ಶಿಬಿರದಲ್ಲಿ ಡಾ.ಅಭಿಜಿತ್‌ ಕಾಖಂಡಕಿ ವಿದ್ಯಾರ್ಥಿಗಳ ನೇತ್ರ ತಪಾಸಣೆ ಮಾಡಿದರು   

ಇಳಕಲ್: ‘ಕಣ್ಣು ಮಹತ್ವದ ಅಂಗ. ಕಣ್ಣುಗಳ ಬಗ್ಗೆ ವಿಶೇಷ ಕಾಳಜಿ ಮಾಡಬೇಕು. ಆಗಾಗ ತಪಾಸಣೆ ಮಾಡಿಕೊಂಡು ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಡಾ.ಅಭಿಜಿತ್‌ ಕಾಖಂಡಕಿ ಹೇಳಿದರು.

ರೋಟರಿ ಕ್ಲಬ್‌ ವತಿಯಿಂದ ಇಲ್ಲಿನ ಪ್ರೇರಣಾ ಪ್ರಾಥಮಿಕ ಹಾಗೂ ಬಸವಶ್ರೀ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಕಣ್ಣು ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

‘ಕಣ್ಣಿನ ಆರೋಗ್ಯದ ನಿರ್ಲಕ್ಷ್ಯ ಮಾಡಬಾರದು. ಎಲೆಕ್ಟ್ರಾನಿಕ್ ಉಪಕರಣಗಳ ಅತಿಯಾದ ಬಳಕೆಯ ಪರಿಣಾಮ ಕಣ್ಣಿನ ಮೇಲೆ ಅತೀವ ಒತ್ತಡ ಉಂಟಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಇರಬಹುದಾದ ದೃಷ್ಟಿ ದೋಷದ ಬಗ್ಗೆ ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ಸಮಸ್ಯೆ ಉಲ್ಭಣಿಸುವ ಜತೆಗೆ ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ’ ಎಂದು ಹೇಳಿದರು.

ADVERTISEMENT

ಇಳಕಲ್‌ ರೋಟರಿ ಕ್ಲಬ್‌ ಅಧ್ಯಕ್ಷ ಚಂದ್ರಶೇಖರ ತೋಟಗೇರ, ಬಸವಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗುರಪ್ಪ ರೇಶ್ಮಿ, ರೋಟರಿ ಕ್ಲಬ್‌ ಖಜಾಂಚಿ ಬಸಲಿಂಗಪ್ಪ ತೋಟದ, ಡಾ. ಅಭಿಜಿತ ಕಾಖಂಡಕಿ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭಾಗ್ಯಜ್ಯೋತಿ ಜಿ. ರೇಶ್ಮಿ ಮಾತನಾಡಿದರು.

ಶಿಬಿರದಲ್ಲಿ 190ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಣ್ಣು ತಪಾಸಣೆ ಮಾಡಲಾಯಿತು. ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಅಭಿಜಿತ ಕಾಖಂಡಕಿ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಲಾಯಿತು.

ರೋಟರಿ ಸದಸ್ಯರಾದ ಚಂದ್ರಶೇಖರ ಮಾಳಿ, ಬಸವರಾಜ ಗೋಟೂರ, ರಾಜಶೇಖರ ಸಿಕ್ಕೇರಿಮಠ, ಶ್ರೀನಿವಾಸ ಮಾರಾ, ಸಿದ್ಧಾರ್ಥ ಪಟ್ಟಣಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಟೆಂಗುಂಟಿ, ಪ್ರೇರಣಾ ವಿದ್ಯಾ ಸಂಸ್ಥೆಯ ಸಿಬ್ಭಂದಿ, ಶಿಕ್ಷಕಿ ಈರಮ್ಮ ಕೊಡೇಕಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.