ADVERTISEMENT

ಹಣ ದೋಚಿ ಪರಾರಿಯಾಗುತ್ತಿದ್ದ ಕಳ್ಳರನ್ನು ಸಿನಿಮಿಯ ರೀತಿಯಲ್ಲಿ ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 16:20 IST
Last Updated 4 ಆಗಸ್ಟ್ 2024, 16:20 IST
ಹುನಗುಂದ–ಮುದ್ದೇಬಿಹಾಳ ರಾಜ್ಯ ಹೆದ್ದಾರಿಯಲ್ಲಿ ಕಳ್ಳರ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು
ಹುನಗುಂದ–ಮುದ್ದೇಬಿಹಾಳ ರಾಜ್ಯ ಹೆದ್ದಾರಿಯಲ್ಲಿ ಕಳ್ಳರ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು   

ಹುನಗುಂದ: ಆಂಧ್ರಪ್ರದೇಶದ ಅನಂತಪುರಂನಲ್ಲಿ ಎಟಿಎಂ ಯಂತ್ರ ಒಡೆದು, ಹಣ ದೋಚಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ನಗರದ ಧನ್ನೂರ ರಸ್ತೆಯಲ್ಲಿ ಭಾನುವಾರ ಸ್ಥಳೀಯ ಪೊಲೀಸರು ಸಿನಿಮಿಯ ರೀತಿಯಲ್ಲಿ ಬಂಧಿಸಿದ್ದಾರೆ.

ಕಳ್ಳರು ತಾಲ್ಲೂಕಿನ ಮೂಲಕ ಸಾಗುವ ಮಾಹಿತಿ ಆಧರಿಸಿ ಎಲ್ಲ ಚೆಕ್‌ಪೋಸ್ಟ್ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಕುಷ್ಟಗಿಯಿಂದ ರಾಷ್ಟ್ರೀಯ ಹೆದ್ದಾರಿ 50ರ ಮೂಲಕ ಸಾಗುತ್ತಿದ್ದರು. ಪೊಲೀಸರನ್ನು ಕಂಡೊಡೊನೆ ವೇಗವಾಗಿ ಕಾರು ಚಲಾಯಿಸಿದಾಗ ಪೊಲೀಸ್‌ ವ್ಯಾನ್‌ ಹಾಗೂ ರಾಷ್ಟ್ರೀಯ ಹೆದ್ದಾರಿ ಗಸ್ತು ವಾಹನದ ಮೂಲಕ ಬೆನ್ನತ್ತಲಾಯಿತು. ಹುನಗುಂದ- ಮುದ್ದೇಬಿಹಾಳ ರಾಜ್ಯ ಹೆದ್ದಾರಿ ಮಾರ್ಗ ಮಧ್ಯೆ ಕಾರಿನ ಟೈರ್ ಸ್ಫೋಟಗೊಂಡಿದ್ದರಿಂದ, ಜಮೀನ ಮಾರ್ಗದಲ್ಲಿ ಓಡಿ ಹೋಗುತ್ತಿದ್ದ ಇಬ್ಬರನ್ನು ಸೆರೆಹಿಡಿಯಲಾಯಿತು ಎಂದು ಸಿಪಿಐ ಸುನೀಲ್ ಸವದಿ ತಿಳಿಸಿದರು.

ಇಬ್ಬರು ಆರೋಪಿಗಳು ಹಾಗೂ ಕಾರನ್ನು ಅನಂತಪುರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.  ಪಿಎಸ್‌ಐಗಳಾದ ಚನ್ನಯ್ಯ ದೇವೂರ, ಎಸ್.ಆರ್. ನಾಯಕ, ಎಸ್.ಎ. ಸತ್ತಿಗೌಡರ, ಸಿದ್ದು ಕೌಲಗಿ, ಬಸೀರ್ ಕಲಬುರ್ಗಿ, ಇತರೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.