ರಾಂಪುರ: ಸಮೀಪದ ಬಿಲ್ ಕೆರೂರಿನಲ್ಲಿ ಭಾನುವಾರ ನಡೆದ ನೇತ್ರ ಉಚಿತ ತಪಾಸಣಾ ಶಿಬಿರದಲ್ಲಿ 100 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು.
ಸ್ಥಳೀಯ ಬಿಲ್ವಾಶ್ರಮ ಹಿರೇಮಠದ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಬಿರದಲ್ಲಿ 250 ಕ್ಕೂ ಹೆಚ್ಚು ಜನರ ಕಣ್ಣು ತಪಾಸಣೆ ಮಾಡಲಾಯಿತು. ಅದರಲ್ಲಿ 100 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ಬರುವಂತೆ ಸೂಚಿಸಲಾಯಿತು.
ಬಿಲ್ವಾಶ್ರಮ ಹಿರೇಮಠದ ಲಿಂ.ರುದ್ರಮುನಿ ಶಿವಾಚಾರ್ಯರ 44ನೇ ಪುಣ್ಯಾರಾಧನೆ ನಿಮಿತ್ತ ವಿಜಯಪುರದ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಅವರ ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಬಿಲ್ ಕೆರೂರ ಗ್ರಾಮಸ್ಥರ ಸಹಯೋಗದಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ಡಾ.ಸಂತೋಷಗೌಡ ಪಾಟೀಲ, ಡಾ.ಕಿಶೋರಕುಮಾರ್ ಹಾಗೂ ಡಾ.ಸಂಗನಗೌಡ ಪಾಟೀಲ ರೋಗಿಗಳ ತಪಾಸಣೆ ನಡೆಸಿದರು.
ಶಿಬಿರಕ್ಕೆ ಚಾಲನೆ ನೀಡಿದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಲಕ್ಷ್ಮಣ ಅರಮನಿ, ಲೋಕನಗೌಡ ಪಾಟೀಲ, ಶಿವಪ್ಪ ಇಟಗಿ, ಶಿವನಗೌಡ ಪಾಟೀಲ ಇದ್ದರು. ಶಿಬಿರದಲ್ಲಿ ಹಳ್ಳೂರ, ಸುತಗುಂಡಾರ, ಬೊಮ್ಮನಿಗಿ, ಬೇವೂರು, ಬೋಡನಾಯಕದಿನ್ನಿ, ತಿಮ್ಮಾಪುರ, ಅಡವಿಹಾಳ, ಕೂಡಲಸಂಗಮ, ಚಿಕ್ಕಮ್ಯಾಗೆರಿ, ಬಿಲ್ ಕೆರೂರ ಗ್ರಾಮಗಳ ಜನ ಭಾಗವಹಿಸಿ ಕಣ್ಣು ತಪಾಸಣೆ ಮಾಡಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.