ADVERTISEMENT

ಇಳಕಲ್: 61 ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 15:40 IST
Last Updated 18 ಮಾರ್ಚ್ 2025, 15:40 IST
ಇಳಕಲ್‌ನ ಜೋಷಿಗಲ್ಲಿಯಲ್ಲಿ ಮಂಗಳವಾರ ನಡೆದ  ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಇಳಕಲ್‌ನ ಜೋಷಿಗಲ್ಲಿಯಲ್ಲಿ ಮಂಗಳವಾರ ನಡೆದ  ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಇಳಕಲ್: ನಗರದ ಸುಭಾಷ ಕಾಖಂಡಕಿ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಉಚಿತ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ 61 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು.

ಜೋಷಿಗಲ್ಲಿಯ ಪಾಂಡುರಂಗ ದೇವಸ್ಥಾನ ಹತ್ತಿರದ ಸಮುದಾಯ ಭವನದಲ್ಲಿ ಮಂಗಳವಾರ ಉಚಿತವಾಗಿ ಕನ್ನಡಕ, ಔಷಧ ವಿತರಿಸಲಾಯಿತು. ಕಾರ್ಯಕ್ರಮವನ್ನು ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು.

ಕುಷ್ಟಗಿಯ ರವಿ ಹಿರೇಮಠ ಮಾತನಾಡಿದರು. ನೇತ್ರ ತಜ್ಞ ಸುಶೀಲ ಕಾಖಂಡಕಿ ಅಧ್ಯಕ್ಷತೆ ವಹಿಸಿದ್ದರು.  

ADVERTISEMENT

ಮಹಾದೇವ ಕಾಂಬಾಗಿ, ಮಾಜಿ ಸೈನಿಕ ಶರಣಯ್ಯ ಹಿರೇಮಠ, ಕುಷ್ಟಗಿ ಪುರಸಭೆ ಅಧ್ಯಕ್ಷ ಮಹಾಂತೇಶ ಕೆಲಭಾವಿ, ವೀರೇಶ ಕಲಕಬಂಡಿ, ಶಿವು ಚಲವಾದಿ, ಕೇದಾರನಾಥ ತುರಕಾಣಿ, ಆಸ್ಪತ್ರೆ ಸಿಬ್ಬಂದಿ ಹುಸೇನ್‌ ಮುದಗಲ್ಲ, ಕಂದಕೂರಪ್ಪ ಬಡಗಿ, ವನಿತಾ ಲಮಾಣಿ, ಅನಿತಾ, ಮಹಾದೇವಿ, ಸಂಗಪ್ಪ ಸಂಗಮ, ಅವಿನಾಶ ಗುನಾರಿ ಇದ್ದರು.

ಇಳಕಲ್ ಸುಭಾಸ ಕಾಖಂಡಕಿ ಆಸ್ಪತ್ರೆಯಲ್ಲಿ ಉಚಿತ ನೇತ್ರ ಚಿಕಿತ್ಸೆಗೆ ಒಳಗಾದ ಹಿರಿಯರೊಂದಿಗೆ ಸಿದ್ದನಕೊಳ್ಳ ಶ್ರೀಗಳು ವೈದ್ಯ ಸುಶೀಲ್ ಕಾಖಂಡಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.