
ಪ್ರಜಾವಾಣಿ ವಾರ್ತೆ
ಕುಳಗೇರಿ ಕ್ರಾಸ್: ಗ್ರಾಮದ ಅಂಜನಾದ್ರಿ ಆಸ್ಪತ್ರೆಯಲ್ಲಿ ಫೆ.16 ರಂದು ಸೋಮವಾರ ಬಾಗಲಕೋಟೆ ಪುಲಿಕೇಶಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನುರಿತ ತಜ್ಞ ವೈದ್ಯರಿಂದ ಎಲುಬು, ಕೀಲುಗಳ ತಜ್ಞರು, ನರರೋಗ ತಜ್ಞರು, ಚರ್ಮರೋಗ ತಜ್ಞರು ಈ ಶಿಬಿರದಲ್ಲಿ ಭಾಗವಹಿಸಿ ಈ ಭಾಗದ ಜನರಿಗೆ ಉತ್ತಮ ಚಿಕಿತ್ಸೆಯನ್ನು ನೀಡಲಿದ್ದಾರೆ.
ವೈದ್ಯರಾದ ವಾದಿರಾಜ ಕುಲಕರ್ಣಿ, ನವೀನ ಬೆಳವಲ, ನೀಲು ಪಾಟೀಲ ಸೇರಿದಂತೆ ಅನೇಕ ತಜ್ಞ ವೈದ್ಯರು ಶಿಬಿರದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕ ಡಾ. ಸುರೇಶ ಭಂಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.