ಇಳಕಲ್ : 33 ವರ್ಷಗಳಿಂದ ವಿಭಿನ್ನವಾಗಿ ಗಣೇಶನನ್ನು ರೂಪಿಸಿ ಗಮನ ಸೆಳೆದ ಇಲ್ಲಿಯ ವಿಜಯ ಚಿತ್ರಕಲಾ ಮಹಾವಿದ್ಯಾಲಯ ಈ ಬಾರಿ ನೀರಿನ ನಿರುಪಯುಕ್ತ ಪ್ಲಾಸ್ಟಿಕ್ ಪೈಪ್ ಗಳನ್ನು ಬಳಸಿ ಗಣೇಶ ರೂಪಿಸಿ ಪ್ರತಿಷ್ಠಾಪಿಸಲಾಗಿದೆ.
ಈ ಕಾಲೇಜು ಕಸದಿಂದ ರಸ, ದೃಷ್ಟಿಯಂತೆ ಸೃಷ್ಟ ಪರಿಕಲ್ಪನೆಯಡಿ ಸಮಾಜಕ್ಕೆ ಸಂದೇಶ ನೀಡುವ ನಿಟ್ಟಿನಲ್ಲಿ ಗಣೇಶನನ್ನು ರೂಪಿಸುವ ಹೆಗ್ಗಳಿಗೆ ಹೊಂದಿದೆ. ಸೃಜನಶೀಲ ಕಲಾಕೃತಿಗಳ ಮೂಲಕ ಛಾಪು ಮೂಡಿಸಿರುವ ಪ್ರಾಚಾರ್ಯ ಬಸವರಾಜ ಗವಿಮಠ ನೇತೃತ್ವದಲ್ಲಿ 7 ಅಡಿ ಎತ್ತರದ ಪೈಪಿನ ಗಣಪತಿಯನ್ನು ಈ ಕಲಾಶಾಲೆಯಲ್ಲಿ ತಯಾರಿಸಲಾಗಿದೆ.
ಉಪನ್ಯಾಸಕರಾದ ಎಂ.ಬಿ. ಬಡಿಗೇರ, ರಶ್ಮಿ ಗವಿಮಠ ಮಾರ್ಗದರ್ಶನದಲ್ಲಿ ನೂರಾರು ನಿರುಪಯುಕ್ತ ಪೈಪುಗಳನ್ನು ಹುಡುಕಿ ತಂದು ಸುಮಾರು ಒಂದು ವಾರಗಳ ಕಾಲ ಇಪ್ಪತ್ತಕ್ಕೂ ಹೆಚ್ಚು ಕಲಾ ವಿದ್ಯಾರ್ಥಿಗಳು ಹಗಲಿರುಳು ಕೆಲಸ ಮಾಡಿ ಈ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.
ನೀರಿನ ಮಿತ ಬಳಕೆ, ನೀರು ಪೋಲಾಗದಂತೆ ತಡೆಯುವ ಸಂದೇಶ ಸಾರಲು ಈ ನೀರಿನ ಪೈಪುಗಳನ್ನು ಬಳಸಿ ಗಣೇಶ ನಿರ್ಮಿಸಲಾಗಿದೆ ಪ್ರಾಚಾರ್ಯ ಗವಿಮಠ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.