ADVERTISEMENT

ವಾಹನ ದುರಸ್ತಿಯಿಂದ ಬದುಕು ಕಟ್ಟಿಕೊಂಡರು

ಗ್ರಾಹಕರ ‘ಫಸ್ಟ್ ಚಾಯ್ಸ್’

ಉದಯ ಕುಲಕರ್ಣಿ
Published 11 ಏಪ್ರಿಲ್ 2019, 7:22 IST
Last Updated 11 ಏಪ್ರಿಲ್ 2019, 7:22 IST
ಮುಧೋಳದ ‘ಫಸ್ಟ್ ಚಾಯ್ಸ್’ ನಲ್ಲಿ ಕಾರು ಎಂಜಿನ್‌ ದುರಸ್ತಿಯ ನೋಟ
ಮುಧೋಳದ ‘ಫಸ್ಟ್ ಚಾಯ್ಸ್’ ನಲ್ಲಿ ಕಾರು ಎಂಜಿನ್‌ ದುರಸ್ತಿಯ ನೋಟ   

ಮುಧೋಳ: ವಿವಿಧ ಕಂಪನಿಗಳ ಹಲವಾರು ನಮೂನೆಗಳ ಕಾರುಗಳು ಮಾರುಕಟ್ಟೆಗೆ ಬರುತ್ತಲೇ ಇವೆ. ಆದರೆ ಅವುಗಳನ್ನು ಖರೀದಿಸಿದ ಮೇಲೆ ಅವುಗಳ ನಿರ್ವಹಣೆ ಮಾಲೀಕರು ಹೆಣಗಾಡುತ್ತಾರೆ. ಅದಕ್ಕೆ ಪರಿಹಾರ ಕಲ್ಪಿಸಲು ನಗರದ ಕಿರಣ್‌ಕುಮಾರ ಅರಕೇರಿ ಫಸ್ಟ್ ಚಾಯ್ಸ್‌ ಫ್ರಾಂಚೈಸಿ ಪಡೆದು ವಾಹನ ದುರಸ್ಥಿ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಹಲವರಿಗೆ ಕೆಲಸ ಕೊಟ್ಟಿದ್ದಾರೆ.

ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ಬಿಬಿಎಂ ಮುಗಿದಿ ಸ್ವಂತ ಉದ್ಯೋಗ ಮಾಡುವ ಉದ್ದೇಶದಿಂದ ಮುಧೋಳಕ್ಕೆ ಬಂದ ಕಿರಣ್, ಫಸ್ಟ್‌ ಚಾಯ್ಸ್ ಫ್ರಾಂಚೈಸಿ ಪಡೆದು ಇಲ್ಲಿನ ಇಂಡಸ್ಟ್ರೀಯಲ್ ಎಸ್ಟೇಟ್‌ನಲ್ಲಿ ಕೆಲಸ ಪ್ರಾರಂಭಿಸಿದರು. ಅಲ್ಲಿಗೆ ಬರುವ ವಿವಿಧ ಬಗೆಯ ಕಾರುಗಳ ದುರಸ್ತಿ ಕಾರ್ಯ ಮಾಡುತ್ತಾ ಯಶಸ್ವಿನ ಹಾದಿಯಲ್ಲಿ ಸಾಗಿದ್ದಾರೆ.

ಅಪಘಾತಕ್ಕೀಡಾದ ವಾಹನಗಳನ್ನು ತುರುವುದಕ್ಕಾಗಿ ಟೊಯಿಂಗ್ ವಾಹನ, ಕ್ಯಾಶ್ ಲೆಸ್ಸ್ ಇನ್ಶೂರೆನ್ಸ್ ಸೌಲಭ್ಯ ಸೇರಿದಂತೆ ವರ್ಕಶಾಪ್‌ದಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಿದ್ದಾರೆ. ಮಲ್ಟಿ ಬ್ರ್ಯಾಂಡ್ ವೆಹಿಕಲ್ ಸ್ಕ್ಯಾನರ್, ಅಧುನಿಕ ಪೆಂಟ್ ಬೂತ್, ಪೆಂಟ್ ಮಿಕ್ಸಿಂಗ್ ಯೂನಿಟ್, ವೀಲ್ ಆಲೈನ್‌ಮೆಂಟ್, ವಾಹನ ಮೇಲೆ ಎತ್ತುವ ನಾಲ್ಕು ಟೂ ಪೋಸ್ಟ್, ಹೈಟೆಕ್ ವಾಷಿಂಗ್ ಮೆಶಿನ್, ಎಸಿ ಕಂಪ್ರೆಸರ್‌, ನೈಟ್ರೋಜನ್ ಫಿಲ್ಲಿಂಗ್ ಸೆಂಟರ್, ಡಂಟ್ ತಗೆಯುವ ವ್ಯವಸ್ಥೆ ಇದ್ದು, 20 ಮಂದಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

‘₹1 ಕೋಟಿ ವೆಚ್ಚದಲ್ಲಿ ಘಟಕ ಆರಂಭಿಸಿದ್ದು, ಮುಧೋಳದಲ್ಲಿ ಇದು ನಡೆಯುತ್ತದೆಯೋ ಇಲ್ಲವೋ ಎಂಬ ಭಯ ಆರಂಭದಲ್ಲಿ ಕಾಡಿತ್ತು. ನಮ್ಮ ಸಮಯ ಪಾಲನೆ, ಕಾಳಜಿ, ಗುಣಮಟ್ಟದ ಉಪಕರಣ, ಉತ್ತಮ ಸೇವೆಯ ಫಲವಾಗಿ ಗ್ರಾಹಕರ ವಿಶ್ವಾಸ ಗಳಿಸಿದೆವು. ಹೀಗಾಗಿ ನಮ್ಮ ಸಂಸ್ಥೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ’ ಎಂದುಕಿರಣ್ ಅರಕೇರಿ ಸಂತಸ ವ್ಯಕ್ತಪಡಿಸುತ್ತಾರೆ.

‘ಮುಂದಿನ ದಿನಗಳಲ್ಲಿ ಬ್ಯಾಟರಿ ಚಾಲಿತ ₹ 1 ಲಕ್ಷ ಮೌಲ್ಯದ ಸಣ್ಣ ಕಾರು ಉತ್ಪಾದಿಸುವ ಗುರಿ ಹೊಂದಿದ್ದೇನೆ. ಕಂಪನಿಯ ಅಧಿಕಾರಿಗಳು, ನನ್ನ ಸಹೋದ್ಯೋಗಿಗಳು, ಅಪ್ಪ ರಮೇಶ ಅರಕೇರಿ ಅವರ ಪ್ರೋತ್ಸಾಹದಿಂದ ಇಷ್ಟೆಲ್ಲ ಸಾಧ್ಯವಾಗಿದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.