ಬೀಳಗಿ: ‘ಈ ನೆಲದೊಳಗೆ ಹುಟ್ಟಿರುವ, ಅಂಟಿಕೊಂಡಿರುವ ಎಲ್ಲಾ ಅಸಮಾನತೆಯನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣದ ಬೀಜ ಬಿತ್ತಿದವರು ಗೌತಮ ಬುದ್ಧ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಸೋಮವಾರ ತಥಾಗತ ಗೌತಮ ಬುದ್ಧನ 2,569ನೇ ಜಯಂತಿ ನಿಮಿತ್ತ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌತಮ ಬುದ್ಧರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅವರು ಮಾತನಾಡಿದರು.
ದಲಿತ ಸಂಘರ್ಷ ಸಮಿತಿ ಬೆಳಗಾವಿ ವಿಭಾಗದ ಸಂಚಾಲಕ ಮಹಾದೇವ ಹಾದಿಮನಿ ಮಾತನಾಡಿ, ನಮ್ಮ ಜೀವನವನ್ನು ಅರ್ಥಪೂರ್ಣವಾಗಿಸಬಲ್ಲ ನೆಮ್ಮದಿಯ ನೆಲೆಯಾಗಿಸಬಲ್ಲ ವಿದ್ಯೆಗಳನ್ನು ಉಪದೇಶಿಸಿದ ಮಹಾಗುರು ಗೌತಮ ಬುದ್ಧ ತನ್ನ ಜೀವಿತ ಅವಧಿಯಲ್ಲಿ 84 ಸಾವಿರ ಬೋಧನೆಗಳನ್ನು ಮಾಡಿದ್ದಾರೆ’ ಎಂದು ಹೇಳಿದರು.
ತಹಶೀಲ್ದಾರ್ ವಿನೋದ ಹತ್ತಳ್ಳಿ, ಗ್ರೇಡ್–2 ತಹಶೀಲ್ದಾರ್ ಆನಂದ ಕೋಲಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಸಿ.ಎಸ್.ಗಡ್ದೇವರಮಠ, ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್.ಆದಾಪುರ, ಬಿ.ಜಿ.ಕವಟೇಕರ, ಅನಿಲ ಹೂಗಾರ, ಮೀನಾಕ್ಷಿ ಕೋಟಿ, ಸಂಜಯ ಯಡಹಳ್ಳಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅಣವೀರಯ್ಯ ಪ್ಯಾಟಿಮಠ, ಮುತ್ತು ಬೊರ್ಜಿ, ರಾಜು ಬೊರ್ಜಿ, ಎಂ.ಎಸ್.ಕಾಳಗಿ, ಬಸವರಾಜ ಹಳ್ಳದಮನಿ, ಸಿದ್ದು ಸಾರಾವರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.