ಬಾಗಲಕೋಟೆ: ’ಕೋವಿಡ್–19 ಚಿಕಿತ್ಸೆಗೆ ಕಳೆದ ನಾಲ್ಕು ತಿಂಗಳಲ್ಲಿ ಖರೀದಿಸಿದ ಔಷಧಿ ಸಾಮಗ್ರಿಗಳ ಮೊತ್ತ ₹600 ಕೋಟಿ ದಾಟಿಲ್ಲ. ಇನ್ನು ಮೂರು ಸಾವಿರ ಕೋಟಿಯ ಅವ್ಯವಹಾರ ಎಲ್ಲಿಯದು‘ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಶ್ನಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಕಾಂಗ್ರೆಸ್ ನಾಯಕರಿಗೆ ಉದ್ಯೋಗದ ಕೊರತೆ ಇದೆ. ಈ ರೀತಿ ತಪ್ಪು ಮಾಹಿತಿ ನೀಡುತ್ತಿರುವುದು ಅವರಿಗೆ ಗೌರವ ತರುವ ಕೆಲಸವಲ್ಲ‘ ಎಂದು ತಿರುಗೇಟು ನೀಡಿದರು.
‘ಕೋವಿಡ್‌ನ ಸಂಕಷ್ಟದ ಸಂದರ್ಭದಲ್ಲಿ ಅಧಿಕಾರಿಗಳು ಹಗಲು–ರಾತ್ರಿ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಬೆನ್ನು ತಟ್ಟಿ ನೈತಿಕಸ್ಥೈರ್ಯ ತುಂಬುವುದು ಬಿಟ್ಟು ಈ ರೀತಿ ಸುಳ್ಳು ಆರೋಪಗಳ ಮೂಲಕ ಅವರ ಮಾನಸಿಕ ಸ್ಥೈರ್ಯ ಕುಗ್ಗಿಸುವುದು ಅನುಭವಿ ರಾಜಕಾರಣಿಗೆ ಸಲ್ಲ. ಇದು ರಾಜಕಾರಣ ಮಾಡಲು ಸಮಯವೂ ಅಲ್ಲ. ಅಗ್ಗದ ಪ್ರಚಾರ ತೆಗೆದುಕೊಳ್ಳುವುದು ಬಿಟ್ಟು ಸರ್ಕಾರಕ್ಕೆ ಮಾರ್ಗದರ್ಶನ ಮಾಡಿ‘ ಎಂದು ಪರೋಕ್ಷವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.