ADVERTISEMENT

ಮೊದಲ ಹಂತದ ಚುನಾವಣೆ: ಜಮಖಂಡಿ ಉಪವಿಭಾಗ ಮತದಾನ ಆರಂಭ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 2:41 IST
Last Updated 22 ಡಿಸೆಂಬರ್ 2020, 2:41 IST
ಗ್ರಾಮ ಪಂಚಾಯಿತಿ ಚುನಾವಣೆಗೆ ಮತ ಚಲಾವಣೆಗೆ ಬಂದ ಗ್ರಾಮಸ್ಥರು
ಗ್ರಾಮ ಪಂಚಾಯಿತಿ ಚುನಾವಣೆಗೆ ಮತ ಚಲಾವಣೆಗೆ ಬಂದ ಗ್ರಾಮಸ್ಥರು   

ಬಾಗಲಕೋಟೆ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಗೆ ಮಂಗಳವಾರ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ.

ಚುಮು ಚುಮು ಚಳಿಯ ನಡುವೆ ಮುಂಜಾನೆ 7 ಗಂಟೆಯಿಂದ ಮತದಾನ ಕೇಂದ್ರದತ್ತ ಮತದಾರರು ಬರುತ್ತಿದ್ದಾರೆ.

ಮತದಾನಕ್ಕೆ ಮತಗಟ್ಟೆಯಲ್ಲಿ ಸಿದ್ಧತೆ ನಡೆದಿದೆ. ಬೀಳಗಿ ತಾಲ್ಲೂಕಿನ ಹೊಸ ಕೊರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ನಿಧಾನವಾಗಿ ಚುರುಕುಗೊಳ್ಳುತ್ತಿರುವುದು ಕಂಡುಬಂದಿತು.

ADVERTISEMENT

ನಾಲ್ಕು ತಾಲ್ಲೂಕುಗಳಲ್ಲಿ ಮತದಾನ ಇಂದು: ಜಮಖಂಡಿ ಉಪವಿಭಾಗದ ವ್ಯಾಪ್ತಿಯ ನಾಲ್ಕು ತಾಲ್ಲೂಕುಗಳ (ಜಮಖಂಡಿ, ಮುಧೋಳ, ರಬಕವಿ-ಬನಹಟ್ಟಿ, ಬೀಳಗಿ) 88 ಗ್ರಾಮ ಪಂಚಾಯಿತಿಗಳ 1397 ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ಚುನಾವಣಾ ಕಾರ್ಯಕ್ಕೆ 720 ಪ್ರಿಸೆಂಡಿಗ್ ಅಧಿಕಾರಿ, 720 ಸಹಾಯಕ ಪ್ರಿಸೆಂಡಿಂಗ್ ಅಧಿಕಾರಿ ಹಾಗೂ 1440 ಮತಗಟ್ಟೆ ಅಧಿಕಾರಿ ಸೇರಿ ಒಟ್ಟು 2880 ಸಿಬ್ಬಂದಿ ನಿಯೋಜಿಸಲಾಗಿದೆ.

ಜಮಖಂಡಿ ಉಪವಿಭಾಗದಲ್ಲಿ ಒಟ್ಟು 4.80,242 ಮತದಾರರು ಇದ್ದು, ಅದರಲ್ಲಿ 2.39,437 ಪುರುಷರು, 2.40,787 ಮಹಿಳೆಯರು 18 ಇತರೆ ಮತದಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.