
ಶಿರೂರ(ರಾಂಪುರ): ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಎಸ್.ಎನ್.ರಾಂಪುರ ಹೇಳಿದರು.
ಸ್ಥಳೀಯ ಚಾವಡಿಯಲ್ಲಿ ಬುಧವಾರ ಜಿ.ಪಂ, ತಾ.ಪಂ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಹಾಗೂ ಶಿರೂರ ಪಟ್ಟಣ ಪಂಚಾಯತಿ ಆಶ್ರಯದಲ್ಲಿ ಜರುಗಿದ ಹೋಬಳಿ ಮಟ್ಟದ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ವರದಾನವಾಗಿದ್ದು, ಆಯಾ ಇಲಾಖೆಯ ಅಧಿಕಾರಿಗಳು ಯೋಜನೆಗಳನ್ನು ಫಲಾನುಭವಿಗಳ ಮನೆ ಮನೆಗೆ ತಲುಪಿಸಲು ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಫಲಾನುಭವಿಗಳ ಇದರ ಪ್ರಯೋಜನ ಪಡೆಯಬೇಕು ಎಂದರು.
ಗ್ಯಾರಂಟಿ ಯೋಜನೆಯ ಸದಸ್ಯರಾದ ರಂಗಪ್ಪ ಮಳ್ಳಿ, ಶ್ರವಣಕುಮಾರ ಖಾತೆದಾರ. ಪ.ಪಂ ಮುಖ್ಯಾಧಿಕಾರಿ ಶಿವಾನಂದ ಆಲೂರ, ಪ.ಪಂ ನಾಮನಿರ್ದೇಶಕರಾದ ಹನಮಂತ ಆಡಿನ, ಜಗದೀಶ ದೇಸಾನಿ, ಸಿದ್ದಪ್ಪ ಗಾಳಿ, ಗ್ರಾ.ಪಂ ಮಾಜಿ ಸದಸ್ಯರಾದ ಸುರೇಶ ರಾಜೂರ, ರಾಮನಗೌಡ ಮಾಚಾ, ಮುದಕಪ್ಪ ಬಿಲ್ಲಾರ, ಸಿದ್ದಪ್ಪ ದಂಡಿನ ಹಾಗೂ ಶಿಶು ಅಭಿವೃದ್ದಿ ಇಲಾಖೆಯ ರಮೇಶ ಸೂಳಿಕೇರಿ, ಆಹಾರ ಇಲಾಖೆಯ ಎಸ್.ಆರ್.ಗಯಾಳಿ, ಹೆಸ್ಕಾಂ ಅಧಿಕಾರಿ ಬಾಲಚಂದ್ರ ಹಲಗತ್ತಿ, ರಸ್ತೆ ಸಾರಿಗೆ ಸಂಸ್ಥೆಯ ಮಹಾಂತೇಶ ಕಟಗಿ, ಕೆ.ಎಫ್.ಮಾಯಾಚಾರಿ, ಕಂದಾಯ ಇಲಾಖೆ ಸಿಬ್ಬಂದಿ, ಶಿರೂರ ಪಟ್ಟಣದ ಹಿರಿಯರು, ಮಹಿಳಾ ಫಲಾಭವಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.