ADVERTISEMENT

ಹೆಲಿಕಾಪ್ಟರ್‌ನಲ್ಲಿ ಚಾಲುಕ್ಯರ ಸ್ಮಾರಕಗಳ ವೀಕ್ಷಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:35 IST
Last Updated 16 ಜನವರಿ 2026, 7:35 IST
   

ಬಾಗಲಕೋಟೆ: ಚಾಲುಕ್ಯ ಉತ್ಸವ ಅಂಗವಾಗಿ ಬಾದಾಮಿ ಚಾಲುಕ್ಯರ ಪ್ರಮುಖ ಸ್ಥಳಗಳನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಹೆಲಿ ಟೂರಿಸಂ ಹೆಸರಿನಲ್ಲಿ ಸೌಲಭ್ಯ ಕಲ್ಪಿಸಲಾಗಿದ್ದು, ಜ.17 ರಿಂದ 20ರವರೆಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 4ರವರೆಗೆ ಬಾದಾಮಿಯ ವೀರಪುಲಕೇಶಿ ಕಾಲೇಜು ಕ್ರೀಡಾ ಮೈದಾನದಿಂದ ಹೆಲಿಕಾಫ್ಟರ್ ಹಾರಲಿದೆ.

ಬಾದಾಮಿಯ ಪ್ರಸಿದ್ಧ ಮರಳು ಶಿಲೆಯ ಬೆಟ್ಟಗಳು, ಗುಹಾಂತರ ದೇವಾಲಯಗಳು, ಅಗಸ್ತ್ಯ ತೀರ್ಥ ಹೊಂಡ, ಚಾಲುಕ್ಯರ ಕಾಲದ ಕೋಟೆ, ಬನಶಂಕರಿ ದೇವಸ್ಥಾನ ಮತ್ತು ಹರಿದ್ರನಾಥ ಪುಷ್ಕರಣಿ ಇತ್ಯಾದಿ ಪ್ರವಾಸಿ ತಾಣಗಳನ್ನು ವೈಮಾನಿಕವಾಗಿ ಕಣ್ತುಂಬಿಸಿಕೊಳ್ಳಬಹುದಾಗಿದೆ.

ADVERTISEMENT

ಒಂದು ಟ್ರಿಪ್ ಗೆ ಒಬ್ಬರಿಗೆ ₹4 ಸಾವಿರ ನಿಗದಿಮಾಡಲಾಗಿದೆ. ಬುಕ್ಕಿಂಗ್ ಹಾಗೂ ಮಾಹಿತಿಗೆ ಬಾಹುಬಲಿ (97406 68512) ಗೋಪಾಲ ಹಿತ್ತಲಮನಿ (78295 38950) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.