ADVERTISEMENT

ಹಿಂದೂ ಸಂಘಟಿತರಾದರೆ ಮಾತ್ರ ದೇಶ ಉಳಿಯಲಿದೆ: ಯತ್ನಾಳ

ವೀರ ರಾಣಿ ಕಿತ್ತೂರ ಚನ್ನಮ್ಮ ಜಯಂತಿ–ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಯತ್ನಾಳ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 3:01 IST
Last Updated 30 ಅಕ್ಟೋಬರ್ 2025, 3:01 IST
ಮುಧೋಳ ತಾಲ್ಲೂಕಿನ  ಮರಿಕಟ್ಟಿ  ಗ್ರಾಮದಲ್ಲಿ  ವೀರರಾಣಿ ಕಿತ್ತೂರ ಕಿತ್ತೂರು ಚನ್ನಮ್ಮನ  ಮೂರ್ತಿ ಅನಾವರಣ ಕಾರ್ಯಕ್ರಮ ಮಂಗಳವಾರ ನಡೆಯಿತು
ಮುಧೋಳ ತಾಲ್ಲೂಕಿನ  ಮರಿಕಟ್ಟಿ  ಗ್ರಾಮದಲ್ಲಿ  ವೀರರಾಣಿ ಕಿತ್ತೂರ ಕಿತ್ತೂರು ಚನ್ನಮ್ಮನ  ಮೂರ್ತಿ ಅನಾವರಣ ಕಾರ್ಯಕ್ರಮ ಮಂಗಳವಾರ ನಡೆಯಿತು   

ಮುಧೋಳ: ಚನ್ನಮ್ಮ ಕೇವಲ ಒಂದು ಜಾತಿಗೆ ಸಿಮೀತವಾಗಿಲ್ಲ. ಹಿಂದುಗಳು ಸಂಘಟಿತರಾಗಬೇಕು. ಶೇ 13 ರಿಂದ 18 ಇರುವ ಮುಸ್ಲಿಮರು ಈಗಾಗಲೇ ಇಷ್ಟು ಹಾರಾಡುತ್ತಿದ್ದಾರೆ. ಅವರೇನಾದರೂ ಶೇ 40ಕ್ಕೆ ಬಂದರೆ ಹಿಂದು ಗ್ರಾಮ ಪಂಚಾಯ್ತಿ ಸದಸ್ಯ, ಎಂಎಲ್‍ಎ ಆಗಲು ಸಾಧ್ಯವಿಲ್ಲ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.

ಅವರು ಮಂಗಳವಾರ ತಾಲ್ಲೂಕಿನ ಮರಿಕಟ್ಟಿ ಗ್ರಾಮದಲ್ಲಿ ವೀರ ರಾಣಿ ಕಿತ್ತೂರ ಚನ್ನಮ್ಮ 247ನೇ ಜಯಂತ್ಯುತ್ಸವ ಹಾಗೂ ಕಿತ್ತೂರು ಚನ್ನಮ್ಮನ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಬಾ ಸಾಹೇಬ ಅಂಬೇಡ್ಕರ್ ಅವರು ಇಲ್ಲಿರುವ ಮುಸ್ಲಿಂಮರು ಪಾಕಿಸ್ತಾನಕ್ಕೆ ಹೋಗಬೇಕು. ಅಲ್ಲಿನ ಹಿಂದೂಗಳು ಭಾರತಕ್ಕೆ ಬರಬೇಕು ಎಂದು ಪ್ರತಿಪಾದಿಸಿದ್ದರು. ಆದರೆ ಗಾಂಧಿಯವರು ರಾಷ್ಟ್ರಪಿತ ಆಗಲು ನೆಹರು ಪ್ರಧಾನಿಮಂತ್ರಿ ಆಗಲು ಬಡಿದಾಡಿ ಈ ದೇಶ ಹಾಳು ಮಾಡಿದರು’ ಎಂದು ವಿಷಾದಿಸಿದರು.

‘ಲಿಂಗಾಯತ ವೀರಶೈವ ಬೇರೆ, ಬೇರೆ ಅಲ್ಲ. ಎರಡೂ ಒಂದೇ ಇಬ್ಬರೂ ಈಶ್ವರ ಲಿಂಗವನ್ನೇ ಪೂಜೆ ಮಾಡುತ್ತಾರೆ. ಕಲ್ಲು ದೇವರು ದೇವರಲ್ಲ ಎಂದು ಹೇಳುವ ಸ್ವಾಮಿ ನಿಮ್ಮ ಮನೆಯಲ್ಲಿ‌ ದೇವರಕೋಣೆ ಮ್ಯೂಸಿಮ್ ಮಾಡಿದ್ದೀರಿ ಅದನ ತೆಗೆಯಿರಿ ಹೊಳೆಗೆ ಎಸೆಯರಿ ಅಂತಾನ ಮತ್ತ ಖ್ಯಾವಿ ಹಾಕುವುದೇಕೆ?, ಖ್ಯಾವಿ ಧರಿಸುವುದನ್ನು ಬಿಟ್ಟು ಬೇರೆ ಬಣ್ಣದ ಹಸಿರು ಬಣ್ಣದ ಬಟ್ಟೆ ಹಾಕಲಿ ಆವಾಗ ಇವರಿಗೆ ಯಾರೂ ನಮಸ್ಕರಿಸುವುದಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಹನಮಂತ ದೇವರು ಇರದ ಹಳ್ಳಿ ಭಾರತದಲ್ಲಿ ಇಲ್ಲ. ದಲಿತರು ಇರದ ಹಳ್ಳಿ ಇಲ್ಲ. ಅದಕ್ಕೆ ಎಲ್ಲ ಗ್ರಾಮಗಳಲ್ಲಿ ದಲಿತರು, ಹಾಲಮತ ಸಮಾಜ, ವಾಲ್ಮೀಕಿ ಸಮಾಜದವರು ಮೂಲತಃ ಸನಾತನ ಧರ್ಮದವರು ಇದನ್ನು ನಾವು ಅರ್ಥೈಸಿಕೊಳ್ಳಬೇಕು’ ಎಂದು ಹೇಳಿದರು.

‘ಕನ್ಹೇರಿ ಸ್ವಾಮಿಗಳು ಸನಾತನ ಧರ್ಮ ಉಳಿಯುವ ಬಗ್ಗೆ ಗಟ್ಟಿಯಾಗಿ ಮಾತನಾಡಿದ್ದಾರೆ. ಅವರನ್ನು ವಿಜಯಪುರ–ಬಾಗಲಕೋಟೆ ಜಿಲ್ಲೆಯಲ್ಲಿ ನಿರ್ಭಂದ ಹೇರಲಾಗಿದೆ. ಕಾನೂನು ಮೂಲಕ ಹೋರಾಟ ಮಾಡಿ ಅವರನ್ನು ಭವ್ಯ ಮೆರವಣಿಗೆ ಮೂಲಕ ಜಿಲ್ಲೆಗೆ ಕರಿಸಿಕೊಳ್ಳುತ್ತೇವೆ’ ಎಂದು ಸವಾಲು ಹಾಕಿದರು.

‘ಕಾಡಸಿದ್ಧೇಶ್ವರ ಸ್ವಾಮೀಜಿ ಕರ್ಮಯೋಗಿಗಳು. ಅವರು ನಾಟಕ ಮಾಡಿಕೊಂಡು ಬದುಕಿದವರಲ್ಲ. ನುಡಿದಂತೆ ನಡೆಯುತ್ತಿರುವ ಸಂತ. ಬಸವಲಿಂಗಾಯನಮ ಅಂತಾ ನಾಟಕ ಮಾಡುವುದಿಲ್ಲ. ಪಾದಪೂಜೆ ಸನಾತನ ಧರ್ಮದ ಭಾಗ. ಪೂಜ್ಯಪಾದಗಳನ್ನು ಪೂಜಿಸಿಕೊಳ್ಳಲು ಅರ್ಹತೆ ಬೇಕಾಗುತ್ತದೆ. ಅದಕ್ಕೆ ಅವರು ಪಾದಪೂಜೆ ಮಾಡಬೇಡಿ’ ಎಂದು ವ್ಯಂಗ್ಯವಾಗಿ ಹೇಳಿದರು.

ಗೋವುಗಳನ್ನು ರಕ್ಷಿಸಿದರೆ ಭೂಮಿಯನ್ನು ರಕ್ಷಿಸಿದಂತೆ. ಮದ್ದೂರಿನಲ್ಲಿ ಗಣೇಶ ವಿಸರ್ಜನೆಗೆ ಕೂಡಾ ಕಾಂಗ್ರೆಸ್‌ ಸರ್ಕಾರ ತೊಂದರೆ ಮಾಡಿತು ಎಂದರು

ಶೂರ್ಪಾಲಿ ಅವಜಿಕರ ಆಶ್ರಮದ ಗಿರಿಶಾನಂದ ಮಹಾರಾಜರು ಮಾತನಾಡಿದರು. ಕೂಡಲಸಂಗಮದ ಬಸವಜಯಮೃತುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಶೈಲಗೌಡ ಪಾಟೀಲ, ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಧರೇಪ್ಪ ಸಾಂಗಲಿಕರ ಮಾತನಾಡಿದರು.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಮೋಹನ ಜಾಧವ, ಸುಭಾಷ್ ಪಾಟೀಲ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.