ADVERTISEMENT

ಹೋಳಿ ಹಬ್ಬ: ಬಣ್ಣ ಬಣ್ಣದ ಆಧುನಿಕ ಹಲಗೆಗಳು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:57 IST
Last Updated 2 ಮಾರ್ಚ್ 2026, 6:57 IST
ಬನಹಟ್ಟಿ ಸಮೀಪದ ರಾಂಪುರದಲ್ಲಿ ಆಧುನಿಕ ಹಲಗೆಗಳನ್ನು ಮಾರಾಟ ಮಾಡಲಾಯಿತು
ಬನಹಟ್ಟಿ ಸಮೀಪದ ರಾಂಪುರದಲ್ಲಿ ಆಧುನಿಕ ಹಲಗೆಗಳನ್ನು ಮಾರಾಟ ಮಾಡಲಾಯಿತು   

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ಅವಳಿ ನಗರಗಳಲ್ಲಿ ಈಗ ಹೋಳಿ ಹುಣ್ಣಿಮೆ ಅಂಗವಾಗಿ ಹಲಗೆಗಳ ಮಾರಾಟ ಜೋರಾಗಿದ್ದು, ಅದರಲ್ಲೂ ಬಣ್ಣ ಬಣ್ಣದ ಹಲಗೆಗಳಿಗೆ ಯುವಕರ ಬೇಡಿಕೆ ಹೆಚ್ಚಾಗಿದೆ.

ನಗರದ ಬಹುತೇಕ ಕಡೆಗಳಲ್ಲಿ ಭಾವಚಿತ್ರಗಳಿರುವ ಹಲಗೆಗಳು ಮಾರಾಟವಾಗುತ್ತಿವೆ. ಹುಲಿ, ಸಿಂಹ ಚಿತ್ರ ಇರುವ ಹಲವು ಹಲಗೆಗಳು, ವಿರಾಟ್‌ ಕೊಹ್ಲಿ, ಸಂಗೊಳ್ಳಿ ರಾಯಣ್ಣನ ಭಾವಚಿತ್ರಗಳಿರುವ ಹಲಗೆಗಳನ್ನು ಹೆಚ್ಚಿನ ಯುವಕರು ಕೇಳುತ್ತಿದ್ದಾರೆ. ₹ 200 ರಿಂದ ₹ 800 ಮೌಲ್ಯದ ಹಲಗೆಗಳು ಮಾರಾಟವಾಗುತ್ತಿವೆ. ಮತ್ತೆ ಕೆಲವರು ಬೇರೆ ಬೇರೆ ಚಿತ್ರಗಳಿರುವ ಪ್ಲೇಟ್‌ಗಳನ್ನು ಖರೀದಿಸುತ್ತಿದ್ದಾರೆ ಎನ್ನುತ್ತಾರ ಸ್ಥಳೀಯ ಮಾರಾಟಗಾರ ಮಹಾಂತೇಶ ಹೂಗಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT