
ಕಮತಗಿ (ಅಮೀನಗಡ): ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಲಿಂ.12ನೇ ಹುಚ್ಚೇಶ್ವರ ಸ್ವಾಮೀಜಿ ಪುಣ್ಯಸ್ಮರಣೋತ್ಸವದ ಅಂಗವಾಗಿ ಭಾನುವಾರ ಅವರ ಚಿತ್ರದ ಮೆರವಣಿಗೆ ಸಕಲ ವಾದ್ಯ ಮೇಳಗಳೊಂದಿಗೆ ಸಂಭ್ರಮದಿಂದ ನೆರವೇರಿತು.
ಹುಚ್ಚೇಶ್ವರ ಶ್ರೀಮಠದಿಂದ ಆರಂಭವಾದ ಮೆರವಣಿಗೆಗೆ 13ನೇ ಹೊಳೆ ಹುಚ್ಚೇಶ್ವರ ಸ್ವಾಮೀಜಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಸ್ ನಿಲ್ದಾಣ, ಬೀರೇಶ್ವರ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ, ಹಳೆ ಕೆನರಾ ಬ್ಯಾಂಕ್, ಇಂಗಳಗಿ ರಸ್ತೆ, ಗಾಂಧಿ ಚೌಕ್ ಮೂಲಕ ಹುಚ್ಚೇಶ್ವರ ಪ್ರೌಢಶಾಲಾ ಆವರಣಕ್ಕೆ ತಲುಪಿತು.
ಮೆರವಣಿಗೆಯಲ್ಲಿ ಈರಣ್ಣ ತಿಗಡಿ, ಶಂಕರ ಬಡದಾನಿ, ಚೆನ್ನಪ್ಪ ಹಳ್ಳೂರ, ಬಿ.ವಿ ಬೀರಕಬ್ಬಿ, ಚೇತನ ಕಡ್ಲಿಮಟ್ಟಿ, ಮುತ್ತು ಬೆಲ್ಲದ,ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಎಸ್. ವಿ ಬಾಗೇವಾಡಿ, ಎಚ್.ಎಂ.ಪಾಟೀಲ, ಪಿ.ಐ.ಮೋಮಿನ, ಹುಚ್ಚೇಶ ಹನಮಶೆಟ್ಟಿ,ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಮಹಾ ರುದ್ರಾಭಿಷೇಕ: ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿನ ಸಂಘದ ಸಂಸ್ಥಾಪಕ, ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಲಿಂ. 12ನೇ ಸ್ವಾಮೀಜಿ ಶಿಲಾಮೂರ್ತಿಗೆ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನಡೆಯಿತು.
ಸಂಘದ ಅಧ್ಯಕ್ಷ ಹುಚ್ಚೇಶ್ವರ ಸ್ವಾಮೀಜಿ, ಸಹ ಕಾರ್ಯದರ್ಶಿ ವಿದ್ಯಾಧರ ಮಳ್ಳಿ, ನಿರ್ದೇಶಕ ಮಂಡಳಿಯ ಎಂ.ಬಿ. ಶಾಬಾದಿ, ಎಸ್.ಜಿ. ಗುರಿಕಾರ, ಎಂ.ಎಸ್. ಹುಚ್ಚೇಶ್ವರಮಠ ಇದ್ದರು.
ಹುಚ್ಚೇಶ್ವರ ಶ್ರೀಗಳ ಸೇವೆ ಅನನ್ಯ: ಹುಚ್ಚೇಶ್ಚರ ಶ್ರೀ
ಗುಳೇದಗುಡ್ಡ: ‘ಸಮಾಜ ಭಕ್ತರಿಗಾಗಿ ಹಗಲಿರುಳು ಶ್ರಮಿಸಿದ್ದ ಲಿಂ.12ನೇ ಹುಚ್ಚೇಶ್ವರ ಶ್ರೀಗಳ ಸೇವೆ ಅನನ್ಯವಾಗಿದೆ’ ಎಂದು 13ನೇ ಹೊಳೆ ಹುಚ್ಚೇಶ್ಚರ ಶ್ರೀ ಹೇಳಿದರು. ಕೋಟೆಕಲ್ಲ- ಕಮತಗಿ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದಲ್ಲಿ ಭಾನುವಾರ ನಡೆದ 12ನೇ ಪೀಠಾಧಿಪತಿ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಾದ 12ನೇ ಹುಚ್ಚೇಶ್ವರ ಶ್ರೀಗಳ 41ನೇ ಪುಣ್ಯಸ್ಮರಣೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುಣ್ಯಸ್ಮರಣೋತ್ಸವ ಅಂಗವಾಗಿ ಭಾನುವಾರ ಬೆಳಿಗ್ಗೆ ಕರ್ತೃ ಮಹಾಪ್ರಸಾದಿ ಮರುಳ ಶಂಕರ ದೇವರ ಗದ್ದುಗೆ ಹಾಗೂ 12ನೇ ಹೊಳೆ ಹುಚ್ಚೇಶ್ವರ ಸ್ವಾಮಿಗಳ ಗದ್ದುಗೆಗೆ ಮಹಾ ರುದ್ರಾಭಿಷೇಕ ಬಿಲ್ವಾರ್ಚನೆ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ನಂತರ ಮಹಾ ಮಂಗಳಾರತಿ ಕೋಟೆಕಲ್ಲ ಗ್ರಾಮದ ಪ್ರಮುಖ ಬೀದಿಗಳಲ್ಲಿ 12ನೇ ಹುಚ್ಚೇಶ್ವರ ಸ್ವಾಮಿಗಳ ಚಿತ್ರದ ಭವ್ಯ ಮೆರವಣಿಗೆ ಹಾಗೂ ಪಾಲಕಿ ಉತ್ಸವ ಜರುಗಿತು. ಮೆರವಣಿಗೆಯಲ್ಲಿ ಭಜನೆ ಸೇರಿದಂತೆ ಸಕಲ ವಾದ್ಯ ಮೇಳಗಳು ಪಾಲ್ಗೊಂಡಿದ್ದವು. 13ನೇ ಹೊಳೆ ಹುಚ್ಚೇಶ್ವರ ಸ್ವಾಮಿಗಳಿಂದ ಮಹಾದಾಸೋಹಕ್ಕೆ ಪೂಜೆ ಹಾಗೂ ಗದ್ದುಗೆಗೆ ಮಹಾ ಮಂಗಳಾರತಿ ನಡೆಯಿತು.
ಶಾಂತವೀರಯ್ಯ ಹುಚ್ಚೇಶ್ವರಮಠ ಬಸಲಿಂಗಯ್ಯ ಹುಚ್ಚೇಶ್ವರಮಠ ಶೇಖಪ್ಪ ಕಡಪಟ್ಟಿ ಪ್ರಶಾಂತ ಅಮರಣ್ಣವರಮೈಲಾರಲಿಂಗ ಆಲೂರುಅಶೋಕ ಗೌಡರ ಗುಂಡಪ್ಪ ಕೋಟಿ ಮಲ್ಲಪ್ಪ ತಳವಾರ ಮುದುಕಪ್ಪ ತಿಮಸಾಗರ ಶೇಖಪ್ಪ ಅಮರಣ್ಣವರ ಬಸವರಾಜ್ ಮೇದಾರ ನೀಲಕಂಠ ಶಿವಾಚಾರ್ಯ ಶ್ರೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.