ADVERTISEMENT

ಹುನಗುಂದ ದಾಂದಲೆ: 9 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 15:38 IST
Last Updated 7 ಸೆಪ್ಟೆಂಬರ್ 2018, 15:38 IST

ಹುನಗುಂದ (ಬಾಗಲಕೋಟೆ): ಪಟ್ಟಣದಲ್ಲಿ ಗುರುವಾರಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಅಧ್ಯಕ್ಷ– ಉಪಾಧ್ಯಕ್ಷರ ಚುನಾವಣೆ ವೇಳೆ ನಡೆದ ದಾಂದಲೆಗೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಹುನಗುಂದದ ಮಂಜುನಾಥ ನಾಗಪ್ಪ ಆಲೂರ, ಮುತ್ತಪ್ಪ ಶಿವಪ್ಪ ಅಮರಾವತಿ, ಮುತ್ತಣ್ಣ ಮಲ್ಲಪ್ಪ ಅವರಡ್ಡಿ, ಹನುಮಂತ ನೀಲಪ್ಪ ಅರಿ, ಸುಭಾಷ್ ಸಿದ್ದಪ್ಪ ಮುಕ್ಕಣ್ಣವರ, ಹಿರಣ್ಯಪ್ಪ ಆಲೂರ, ಬಸು ಭೀಮಪ್ಪ ಕುರಿ, ಮಂಜುನಾಥ ಬಸವರಾಜ ವಡ್ಡರ್, ನೀಲಪ್ಪ ಬಂಧಿತರು.

ಪೊಲೀಸರೇ ರಕ್ಷಿಸಿದರು: ಗಲಭೆಯ ವೇಳೆ ಉದ್ರಿಕ್ತರಿಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಪೊಲೀಸರೇ ರಕ್ಷಿಸಿದ್ದಾರೆ ಎನ್ನಲಾಗಿದೆ.

ADVERTISEMENT

’ವಿಜಯಾನಂದ ಹಾಗೂ ಬೆಂಬಲಿಗರನ್ನು ಪಿಕೆಪಿಎಸ್‌ ಒಳಗಿನ ಕೊಠಡಿಯೊಳಗೆ ಕೂರಿಸಿ ಹೊರಗಿನಿಂದ ಬೀಗ ಹಾಕಿಕೊಂಡ ಪೊಲೀಸರು ಗುಂಪಿನ ದಾಳಿಯಿಂದ ರಕ್ಷಣೆ ನೀಡಿದ್ದಾರೆ. ಪೊಲೀಸರ ಸಮಯಪ್ರಜ್ಞೆಯಿಂದ ದೊಡ್ಡ ತೊಂದರೆ ತಪ್ಪಿದೆ. ಆದರೂ ಕಲ್ಲು ತೂರಾಟದ ವೇಳೆ ವಿಜಯಾನಂದ ಗಾಯಗೊಂಡಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನೆರವಾದ ಸಿ.ಸಿ.ಟಿವಿ ಕ್ಯಾಮೆರಾ: ಪಿಕೆಪಿಎಸ್ ಆವರಣದಲ್ಲಿ ಅಳವಡಿಸಿದ್ದ ಸಿ.ಸಿ ಟಿವಿ ಕ್ಯಾಮೆರಾ ಹಾಗೂ ಭದ್ರತೆಗೆ ಬಂದಿದ್ದ ಪೊಲೀಸರು ಆರೋಪಿಗಳನ್ನು ಗುರುತಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಐದು ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು, ಸಂಜೆ ನಾಲ್ವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.