
ಬಾಗಲಕೋಟೆ: ಹುನಗುಂದಮ ಇಳಕಲ್ ತಾಲ್ಲೂಕಿನ ವಿವಿಧೆಡೆ ಅಕ್ರಮ ಮರಳು ಅಡ್ಡೆಗಳ ಪರಿಶೀಲನೆಯನ್ನು ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳ ತಂಡ ಶನಿವಾರವೂ ಮುಂದುವರೆಸಿದೆ.
ಹುನಗುಂದ ತಾಲ್ಲೂಕಿನ ಚಿತ್ತವಾಡಗಿ, ಹಿರೇಮಳಗಾವಿ ಹಾಗೂ ಇಳಕಲ್ ತಾಲ್ಲೂಕಿನ ಕರಡಿಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿರುವುದನ್ನು ಲೋಕಾಯುಕ್ತ ತಂಡ ಪತ್ತೆ ಮಾಡಿದೆ.
ದಾಳಿಯ ವೇಳೆ ಅಕ್ರಮ ಮರಳುಗಾರಿಕೆಗೆ ಬಳಕೆ ಮಾಡುತ್ತಿದ್ದ ಎಂಟು ಹಿಟ್ಯಾಚಿ, 10 ಟಿಪ್ಪರ್, ಎರಡಯ ಬೈಕ್ ಹಾಗೂ 150 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿರುವ ಅಧಿಕಾರಿಗಳು ಹುನಗುಂದ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ಇಳಕಲ್ ಗ್ರಾಮೀಣ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಿದ್ದಾರೆ.
ಇನ್ನೂ ಬೇರೆ ಕಡೆಗಳಲ್ಲಿಯೂ ದಾಳಿ ಮಾಡಲಾಗಿದ್ದು, ಪರಿಶೀಲನೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಮಾರ್ಗದರ್ಶನದಲ್ಲಿ ಬೆಂಗಳೂರ ಲೋಕಾಯುಕ್ತ ಡಿಎಸ್ಪಿ ಸುನೀಲ ನಾಯ್ಕ್, ಸಿಪಿಐಗಳಾದ ಎ.ಎಸ್.ಗುದಿಗೊಪ್ಪ, ಎಸ್.ಬಿ.ಪಾಟೀಲ ಸೇರಿದಂತೆ ಐವರು ಸಿಪಿಐ ಹಾಗೂ 25 ಜನ ಸಿಬ್ಬಂದಿ 13 ಕಡೆಗೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು.