ಬಸವಕಲ್ಯಾಣ: ನಗರದಲ್ಲಿ ಮಂಗಳವಾರ ಶಾಸಕರ ಜನಸಂಪರ್ಕ ಕಚೇರಿ ಆರಂಭಿಸಲಾಯಿತು. ಹಾರಕೂಡ ಚನ್ನವೀರ ಶಿವಾಚಾರ್ಯರು ರಿಬ್ಬನ್ ಕತ್ತರಿಸಿ ಉದ್ಘಾಟನೆ ನೆರವೇರಿಸಿದರು.
ನಂತರ ಧಾರ್ಮಿಕ ವಿಧಿವಿಧಾನ, ವಿಶೇಷ ಪೂಜೆ, ಗಣ್ಯರ ಸನ್ಮಾನ ನಡೆಯಿತು. ಮಠಾಧೀಶರು, ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳು ಕೂಡ ಶಾಸಕ ಶರಣು ಸಲಗರ ಅವರನ್ನು ಸನ್ಮಾನಿಸಿದರು.
ಬೀದಿಬದಿ ವ್ಯಾಪಾರ ಮಾಡುವವರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ಪಡೆದುಕೊಳ್ಳುವುದಕ್ಕಾಗಿ ದೊಡ್ಡ ಕೊಡೆಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಸಂಸದ ಭಗವಂತ ಖೂಬಾ, ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ಹುಲಸೂರ ಶಿವಾನಂದ ಸ್ವಾಮೀಜಿ, ಮುಚಳಂಬ ಪ್ರಣವಾನಂದ ಸ್ವಾಮೀಜಿ, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಗಡಿಗೌಡಗಾಂವ ಶಾಂತವೀರ ಶಿವಾಚಾರ್ಯರು, ಸಾಯಗಾಂವ ಶಿವಾನಂದ ದೇವರು, ರಾಜಾಬಾಗ ಸವಾರ ದರ್ಗಾ ಮುಖ್ಯಸ್ಥ ಜಿಯಾಪಾಶಾ ಜಾಗೀರದಾರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ, ದೀಪಕ ಗಾಯಕವಾಡ, ಅರವಿಂದ ಮುತ್ತೆ, ಜಗನ್ನಾಥ ಪಾಟೀಲ ಮಂಠಾಳ, ಅನಿಲ ಭೂಸಾರೆ, ಲತಾ ಹಾರಕೂಡೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.