ADVERTISEMENT

ಸಂವಿಧಾನದ ಶ್ರೇಷ್ಠತೆ ಅರಿತುಕೊಳ್ಳಿ: ವಿಕ್ರಮ ದೊಡ್ಡಗೌಡರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 16:28 IST
Last Updated 20 ಫೆಬ್ರುವರಿ 2024, 16:28 IST
ಮಹಾಲಿಂಗಪುರ ಸಮೀಪದ ಸೈದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಕಾರ್ಯಕ್ರಮ ನಡೆಯಿತು
ಮಹಾಲಿಂಗಪುರ ಸಮೀಪದ ಸೈದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಕಾರ್ಯಕ್ರಮ ನಡೆಯಿತು   

ಮಹಾಲಿಂಗಪುರ: ಪ್ರತಿಯೊಬ್ಬರೂ ದೇಶದ ಸಂವಿಧಾನದ ಶ್ರೇಷ್ಠತೆ ಹಾಗೂ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು ಎಂದು ಸಮೀರವಾಡಿಯ ಕೆ.ಜೆ. ಸೋಮಯ್ಯಾ ಇಂಗ್ಲಿಷ್ ಮಾಧ್ಯಮ ಶಾಲೆಯ ಕೋ-ಆರ್ಡಿನೇಟರ್ ವಿಕ್ರಮ ದೊಡ್ಡಗೌಡರ ಹೇಳಿದರು.

ಸಮೀಪದ ಸೈದಾಪುರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂವಿಧಾನ ನಮಗೆ ನೀಡಿರುವ ಹಕ್ಕುಗಳು ಎಷ್ಟು ಮುಖ್ಯವೋ ಕರ್ತವ್ಯ ಕೂಡ ಅಷ್ಟೇ ಮುಖ್ಯ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ದುರುಪಯೋಗ ಮಾಡಿಕೊಳ್ಳಬಾರದು’ ಎಂದರು.

ADVERTISEMENT

ಗ್ರಾಮ ಪಂಚಾಯ್ತಿ ಸದಸ್ಯ ಮಹಾಲಿಂಗಪ್ಪ ಸನದಿ, ರಂಗನಗೌಡ ಪಾಟೀಲ, ಬಸವರಾಜ ಪೂಜಾರಿ, ಎಚ್.ಎಸ್. ಭಜಂತ್ರಿ, ವಿಠ್ಠಲ ಹೊಸಮನಿ, ಸಂಗಮೇಶ ಸೋರಗಾಂವಿ ಮಾತನಾಡಿದರು.

ಬಡ ಮಹಿಳೆಯರಿಗೆ ಕುಕ್ಕರ್ ವಿತರಿಸಲಾಯಿತು. ಮೋಹನ ಕೋರಡ್ಡಿ, ಬಸವರಾಜ ಮುನವಳ್ಳಿ, ಪಿ.ಎಂ. ನಾಯಕವಾಡಿ, ಸರಿಕರ, ಮಾಬೂಬಿ ಮೋಮಿನ್, ಚಿನ್ನಪ್ಪ ಬಾಯಪ್ಪಗೋಳ, ಮಲ್ಲಪ್ಪ ಕೌಜಲಗಿ, ಜಯಕುಮಾರ ತೆಳಗಡೆ, ಯಮನಪ್ಪ ಉಪ್ಪಾರ, ಕವಿತಾ ಕಾಂಬಳೆ, ವಿರುಪಾಕ್ಷ ಉಳ್ಳಾಗಡ್ಡಿ, ಶಿವಲಿಂಗ ಪೋಳ, ವಿಜಯಲಕ್ಷ್ಮಿ ಖೋತ ಇದ್ದರು.

ವಿದ್ಯಾರ್ಥಿಗಳು ಗ್ರಾಮದಲ್ಲಿ ಸಂಚರಿಸಿ ಸಂವಿಧಾನ ಹಾಗೂ ಅದರ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಚಿಮ್ಮಡದಲ್ಲಿ: ದೇಶದ ಸಂವಿಧಾನ ವಿಶ್ವದ ಶ್ರೇಷ್ಠ ಗ್ರಂಥವಾಗಿದ್ದು, ಅದರ ಮೌಲ್ಯಗಳನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಬಿರಾದಾರ ಹೇಳಿದರು.

ಚಿಮ್ಮಡದ ಗ್ರಾಮ ಪಂಚಾಯ್ತಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದ್ರಾಕ್ಷಾಯಿಣಿ ಮಂಡಿ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಾಲಾ ಮೋಟಗಿ ಅಧ್ಯಕ್ಷತೆ ವಹಿಸಿದ್ದರು.

ಪ್ರೇಮಾ ಗೋವಿಂದಗೋಳ, ಅನ್ನಪೂರ್ಣ ಮುಗಳಖೋಡ, ಎಂ.ಎಸ್. ಜಿಟ್ಟಿ, ಪ್ರಭು ಮುಧೋಳ, ಅಶೋಕ ಮೋಟಗಿ, ಮನೋಜ ಹಟ್ಟಿ, ನಾಗಪ್ಪ ಆಲಕನೂರ, ಬಾಳೇಶ ಬ್ಯಾಕೋಡ, ತುಕಾರಾಮ ದೊಡಮನಿ, ಪ್ರಭು ಭಜಂತ್ರಿ, ಪ್ರಭು ಗೋವಿಂದಗೋಳ, ಮಹಾಂತೇಶ ಬಡಿಗೇರ ಇದ್ದರು.

ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧಚಿತ್ರವನ್ನು ವಿವಿಧ ವಾದ್ಯವೃಂದಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂವಿಧಾನದ ಜಾಗೃತಿ ಮೂಡಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ಮೆರುಗು ನೀಡಿದರು.

ಮಹಾಲಿಂಗಪುರ ಸಮೀಪದ ಚಿಮ್ಮಡ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸಾರ್ವಜನಿಕರು.
ಮಹಾಲಿಂಗಪುರ ಸಮೀಪದ ಸೈದಾಪುರದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.