ಎಸ್.ಜಿ.ನಂಜಯ್ಯನಮಠ
ಬಾಗಲಕೋಟೆ: ‘ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಂದ ಕಾಂಗ್ರೆಸ್ಸಿಗೆ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಗ್ಯಾರಂಟಿಗಳಿಂದಾಗಿ ಪಕ್ಷ ಅಧಿಕಾರಕ್ಕೆ ಬಂದಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ, ಬಿಜೆಪಿಯನ್ನು ತೆಗಳಿ, ಕಾಂಗ್ರೆಸ್ ಅನ್ನು ಹೊಗಳಿ ಈಗ ಮತ್ತೆ ಬಿಜೆಪಿಗೆ ಹೋಗಿರುವ ಜಗದೀಶ ಶೆಟ್ಟರ್ ನಡೆ ಸರಿಯಲ್ಲ. ಅವರು ಚುನಾವಣೆಯಲ್ಲಿ ಸೋತರೂ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಗೌರವ ನೀಡಲಾಗಿತ್ತು’ ಎಂದರು.
‘ಶೆಟ್ಟರ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ನಮ್ಮವರು ಅವಸರ ಮಾಡಬಾರದಿತ್ತು. ಪಕ್ಷ ಬಿಡಲು ನಮ್ಮಲ್ಲಿ ಅವರಿಗೇನು ಉಸಿರುಗಟ್ಟುವ ವಾತಾವರಣವಿತ್ತು’ ಎಂದು ಪ್ರಶ್ನಿಸಿ, ‘ಶೆಟ್ಟರ್ ಸ್ಥಾನಾಧಾರಿತ ನಾಯಕ’ ಎಂದು ಹೇಳಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ನಿಂಗಪ್ಪ ಗಸ್ತಿ, ಶ್ರೀನಿವಾಸ ಬಳ್ಳಾರಿ, ರಾಜು ಮನ್ನಿಕೇರಿ, ಕುತಬುದ್ದೀನ ಖಾಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.