ADVERTISEMENT

ಜಮಖಂಡಿ | ಆಧುನಿಕ ಕೃಷಿ ಪದ್ಧತಿಯಿಂದ ರೈತರಿಗೆ ಲಾಭ: ಗಣೇಶಪ್ಪ ಗೌಡ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 7:22 IST
Last Updated 19 ಜನವರಿ 2026, 7:22 IST
ಜಮಖಂಡಿಯ ಕುಡಚಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕಿನ ಕೃಷಿ ವಾಣಿಜ್ಯ ಶಾಖೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಗಣ್ಯರು ಮಾಡಿದರು
ಜಮಖಂಡಿಯ ಕುಡಚಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕಿನ ಕೃಷಿ ವಾಣಿಜ್ಯ ಶಾಖೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಗಣ್ಯರು ಮಾಡಿದರು   

ಜಮಖಂಡಿ: ‘ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡು ಬ್ಯಾಂಕ್‌ಗಳು ನೀಡುವ ಕಡಿಮೆ ಬಡ್ಡಿದರದ ಹಣ ಪಡೆದು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಬಾಗಲಕೋಟೆ ಪ್ರಾದೇಶಿಕ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಗಣೇಶಪ್ಪ ಗೌಡ ಹೇಳಿದರು.

ಇಲ್ಲಿನ ಕುಡಚಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಬ್ಯಾಂಕಿನ ಕೃಷಿ ವಾಣಿಜ್ಯ ಶಾಖೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಣೆ ಮಾಡಿ ಮಾತನಾಡಿ, ಆಧುನಿಕ ಕೃಷಿ ಪದ್ಧತಿಯಿಂದ ರೈತರಿಗೆ ಹೆಚ್ಚು ಲಾಭ ದೊರೆಯುತ್ತದೆ ಎಂದರು.

ಕೃಷಿ ವಾಣಿಜ್ಯ ಶಾಖೆ ಜಮಖಂಡಿಯ ಮುಖ್ಯ ವ್ಯವಸ್ಥಾಪಕ ಮಂಜುನಾಥ ಎಚ್.ಕೆ ಮಾತನಾಡಿ, ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್‌ಗಳು ನೀಡುವ ಸಾಲವನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ಉತ್ತಮ ಬೆಳೆ ಬೆಳೆಯಬೇಕು ಹಾಗೂ ಜಮೀನುಗಳನ್ನು ಅಭಿವೃದ್ಧಿ ಮಾಡಿಕೊಳ್ಳಬೇಕು. ಬೆಳೆಗಳ ಜೊತೆಗೆ ಹೈನುಗಾರಿಕೆ, ಆಹಾರ ಸಂಸ್ಕರಣಾ ಘಟಕ, ಕುಕ್ಕುಟೋದ್ಯಮ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಮಾಡಿ ಲಾಭದಾಯಕವಾಗಬೇಕು ಎಂದರು.

ADVERTISEMENT

ವೇದಿಕೆ ಮೇಲೆ ಮುಧೋಳ ಶಾಖೆಯ ಹನಮಂತರಾವ್ ದೇಶಪಾಂಡೆ, ಜಮಖಂಡಿ ಮುಖ್ಯ ಕಚೇರಿಯ ರಂಜಿತ್ ಕುಮಾರ, ಅಶೋಕ್ ಅಗಸಿಬಾಗಿಲ, ಕೃಷಿ ವಾಣಿಜ್ಯ ಶಾಖೆಯ ರೈತರಾದ ಮಹಾಲಿಂಗಪ್ಪ ಕುಂಚನೂರ, ಜಯಪಾಲ್ ಶಿರಹಟ್ಟಿ, ರಾಜುಗೌಡ ಪಾಟೀಲ್, ಆನಂದ್ ಕಂಪು, ಗುರುಪಡಗೌಡ ಪಾಟೀಲ್ ಇದ್ದರು.

ಜಮಖಂಡಿ: ಇಲ್ಲಿನ ಕುಡಚಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕಿನ ಕೃಷಿ ವಾಣಿಜ್ಯ ಶಾಖೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.