ಬಾಗಲಕೋಟೆ: ಸತ್ತವರ ಮೇಲೆ ಕಾಲಿಟ್ಟು ಆಶೀರ್ವದಿಸುವ ಪದ್ಧತಿ ತಪ್ಪು, ಜಂಗಮ ಸ್ವಾಮೀಜಿಗಳಲ್ಲಿ ವಿವೇಕ ಕಡಿಮೆ ಎಂದಿರುವುದನ್ನು ಜಂಗಮರ ಕ್ಷೇಮಾಭಿವೃದ್ಧಿ ಸಂಘ ಖಂಡಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿರೇಶ್ವರ ಚೌಕಿಮಠ, ಬಸವ ತತ್ವ ಪ್ರಚಾರಕ್ಕೆ ನಮ್ಮ ವಿರೋಧವಿರುವುದಿಲ್ಲ. ಆದರೆ, ಒಂದೇ ಆಗಿರುವ ವೀರಶೈವ, ಲಿಂಗಾಯತರನ್ನು ಒಡೆಯುವುದಕ್ಕೆ ವಿರೋಧವಿದೆ ಎಂದರು.
ವೀರಶೈವ ಲಿಂಗಾಯತ ಸಮಾಜವನ್ನು ಒಡೆದು ಆಳಲಿಕ್ಕೆ ಯತ್ನಿಸುತ್ತಿರುವುದು ಸರಿಯಲ್ಲ. ಬಾಲಿಶ ಹೇಳಿಕೆ ಕೂಡಲೇ ಹಿಂಪಡೆದು, ಜಂಗಮ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸಮಾಜದ ವಿರುದ್ಧ ಬಾಲಿಶ ಹೇಳಿಕೆ ಮುಂದುವರೆಸಿದರೆ ಜಂಗಮ ಸಮಾಜ ಕಾನೂನು ಕ್ರಮಕ್ಕೆ ಮುಂದಾಗಲು ಹಿಂಜರಿಯುವುದಿಲ್ಲ ಎಂದರು.
ಪ್ರಭುಸ್ವಾಮಿ ಸರಗಣಾಚಾರಿ, ಕಸ್ತೂರಿಮಠದ ಓಹಿಲೇಶ್ವರ ಸ್ವಾಮೀಜಿ, ಬಸವರಾಜ ಹಿರೇಮಠ, ಮುರುಗೇಶ ನಿಂಬಲಗುಂದಿ, ಎಂ.ಎಸ್. ಪುರಾಣಿಕಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.