ADVERTISEMENT

ಕೆರೂರ| ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ನಿಗಾ ವಹಿಸಲಿ: ಶಾಸಕ ಜೆ.ಟಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 7:13 IST
Last Updated 18 ಫೆಬ್ರುವರಿ 2026, 7:13 IST
ಕೆರೂರ ಸಮೀಪ ಬೀಳಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸೋಮವಾರ ಶಾಸಕ ಜೆ.ಟಿ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು
ಕೆರೂರ ಸಮೀಪ ಬೀಳಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸೋಮವಾರ ಶಾಸಕ ಜೆ.ಟಿ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು   

ಕೆರೂರ: ಗ್ರಾಮದಲ್ಲಿ ಯಾವುದೇ ‌ಅಭಿವೃದ್ದಿ ಕಾಮಗಾರಿ ನಡೆದರೆ ಗ್ರಾಮಸ್ಥರ‌ ನಿಗಾವಹಿಸಬೇಕು, ಕಳಪೆ ಕಾಮಗಾರಿಯಾದರೆ ನನಗೆ ಮಾಹಿತಿ ನೀಡಿರಿ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಅವರು ಸಮೀಪದ ಅನವಾಲ, ಕಾಡರಕೊಪ್ಪ, ಯಂಡಿಗೇರಿ, ಕರಡಿಗುಡ್ಡ ಎಸ್.ಎ., ಗ್ರಾಮದಲ್ಲಿ ವಿವಿಧ ಕಾಮಗಾರಿ ಭೂಮಿ ಪೂಜೆ ಹಾಗೂ ಇನಾಂ ಯರಗೊಪ್ಪ, ಮಾಲಗಿ ಗ್ರಾಮಗಳಲ್ಲಿ ನೂತನ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಅನವಾಲ ಗ್ರಾಮದಲ್ಲಿ ಸುಮಾರು ₹10 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಮತ್ತು ₹10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಕಾಡರಕೊಪ್ಪ ಗ್ರಾಮದಲ್ಲಿ ₹13 ಲಕ್ಷ ವೆಚ್ಚದಲ್ಲಿ ಎರಡು ಶಾಲಾ ಕೊಠಡಿ ನಿರ್ಮಾಣ, ಯಂಡಿಗೇರಿ ಗ್ರಾಮದಲ್ಲಿ ₹10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ₹50 ಲಕ್ಷ ವೆಚ್ಚದಲ್ಲಿ ಕರಡಿಗುಡ್ಡ ಎಸ್ ಎ ಗ್ರಾಮದಿಂದ ನಿರಬೂದಿಹಾಳ ಹಾಗೂ ಯಂಡಿಗೇರಿ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಕಾಮಗಾರಿ ಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.

ADVERTISEMENT

ಇನಾಂ ಯರಗೋಪ್ಪ ಗ್ರಾಮದಲ್ಲಿ ನಿರ್ಮಾಣವಾದ ಎರಡು ಪ್ರಾಥಮಿಕ ಶಾಲಾ ಕೊಠಡಿ, ಮಾಲಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿದರು.

ಹಲಕುರ್ಕಿ ಗ್ರಾಮದಲ್ಲಿ ಸೋಮವಾರ ದಿಗಂಬರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವಧು-ವರರಿಗೆ ಆಶೀರ್ವದಿಸಿದರು.

ಧರ್ಮಣ್ಣ ಭಗವತಿ, ಪ್ರವೀಣ ಚಿಕ್ಕೂರ, ಶಿಕ್ಷಕ ರಸುಲ್ ಬಡೆಖಾನ, ಅಶೋಕ ರೂಗಿ, ಗದಿಗೆಪ್ಪ ತೊರಗಲ್, ಬಿ.ಎಸ್.ಮಾಚಾ, ಗೀತಾ ಉಪ್ಪಾರ, ಮಾಂತೇಶ ಹಡಪದ, ಪಿಡಿಒಗಳಾದ ಚೇತನ ಹೊಸಮನಿ, ಸುಮಂಗಲಾ ಮಳಿಯನ್ನವರ, ಎಂಜಿನಿಯರ್‌ ಅಜಿತ ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.