
ಗುಳೇದಗುಡ್ಡ: ತಾಲ್ಲೂಕಿನ 38 ಹಳ್ಳಿಗಳ ವ್ಯಾಪ್ತಿಯಲ್ಲಿ 12ಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಅವೆಲ್ಲವೂ ರೈತರ ಶ್ರಯೋಭಿವೃದ್ಧಿಗೆ ಕೆಲಸ ಮಾಡುತ್ತಿವೆ. ತಾಲ್ಲೂಕಿನ ಕೋಟೆಕಲ್ ಪಿಕೆಪಿಎಸ್ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಭಿನ್ನ ಯೋಜನೆಗಳನ್ನು ಆರಂಭಿಸುವ ಮೂಲಕ ಮಾದರಿಯಾಗಿದೆ.
ಗೋದಾಮು ನಿರ್ಮಾಣ: ಕೋಟೆಕಲ್ ಪಿಕೆಪಿಎಸ್‌ನಿಂದ ತಾಲ್ಲೂಕಿನ ತೂಗುಣಸಿ ಹತ್ತಿರ 5 ಎಕರೆ 17 ಗುಂಟೆ ಜಮೀನು ಖರೀದಿಸಿ ಅಲ್ಲಿ ಬೃಹತ್ ಪ್ರಮಾಣದ ಗೋದಾಮು 30 ಸಾವಿರ ಸ್ಕೇರ್ ಪೀಟ್ ಜಾಗದಲ್ಲಿ, ಒಟ್ಟು 6.70 ವೆಚ್ಚದಲ್ಲಿ ನಿರ್ಮಾಣವಾಗಿದೆ.
ಇಲ್ಲಿ ರೈತರು ಬೆಳೆದ ಧಾನ್ಯಗಳನ್ನು ಮಾರಾಟ ಮಾಡಬಹುದು. ಪಿಕೆಪಿಎಸ್‌ನಿಂದ ಖರೀದಿಸಲಾಗುವುದು. ರೈತರು ಮಾರಾಟ ಮಾಡದೇಯೂ ಜಾಗ ಪಡೆದು ಧಾನ್ಯದ ಚೀಲಗಳನ್ನು ಇಡುವ ಮೂಲಕ ಶೇ 50 ರಿಂದ ಶೇ 75 ರವರೆಗೆ ಮುಂಗಡ ಹಣ ಪಡೆದುಕೊಳ್ಳಬಹುದು. ಇಲ್ಲವೇ ಜಾಗಕ್ಕೆ ಬಾಡಿಗೆ ನೀಡುವ ಮೂಲಕ ಧಾನ್ಯಗಳನ್ನು ಧೀರ್ಘಕಾಲದವರೆಗೆ ಸಂಗ್ರಹಿಸಿ ಇಡಬಹುದು. ಎಲ್ಲ ಮೂಲ ಸೌಲಭ್ಯಗಳನ್ನು ಗೋದಾಮು ಹೊಂದಿದೆ. ಜೊತೆಗೆ 60 ಮೆಟ್ರಿಕ್ ಟನ್ ಎಲೆಕ್ಟ್ರಾನಿಕ್ ವ್ಹೇ ಬ್ರೀಜ್ ಗೋದಾಮಿಗೆ ಹೊಂದಿಕೊಂಡಂತೆ ನಿರ್ಮಾಣ ಮಾಡಲಾಗಿದೆ.
ವ್ಯಾಪಾರ ಮಳಿಗೆ: 60 ಲಕ್ಷ ವೆಚ್ಚದಲ್ಲಿ ಪಿಕೆಪಿಎಸ್‌ನಿಂದ ಪುರಸಭೆ ಹತ್ತಿರ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಜಾಗ ಖರೀದಿಸಿ 1 ಕೋಟಿಗೂ ಅಧಿಕ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಈಗ ಪೂರ್ಣಗೊಂಡಿದೆ. ಬಟ್ಟೆಗಳ ಶೋ ರೂಂ ಹಾಗೂ ಮಳಿಗೆಗಳನ್ನು ಬಾಡಿಗೆ ನೀಡುವ ಯೋಜನೆ ಇದಾಗಿದೆ.
ಪ್ರಧಾನಮಂತ್ರಿ ಜನೌಷಧಿ ಕೇಂದ್ರ: ಸಾರ್ವಜನಿಕರಿಗೆ ಅಗ್ಗದ ದರದಲ್ಲಿ ಔಷಧಿ ನೀಡುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಇತ್ತೀಚಿಗೆ ಪಟ್ಟಣದ ಚೌಬಜಾರದಲ್ಲಿ ಆರಂಭಿಸಿದ್ದಾರೆ.
ನಬಾರ್ಡ್, ಬಿಡಿಸಿಸಿ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವ ಮೂಲಕ ಹಾಗೂ ಪಿಕೆಪಿಎಸ್‌ನಿಂದ ಹಣ ಹೂಡಿಕೆ ಮಾಡುವ ಮೂಲಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ.
ರೈತ ಮತ್ತು ನೇಕಾರ ಈ ಜಗದ ಎರಡು ಕಣ್ಣುಗಳಿದ್ದಂತೆ. ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೃಹತ್ ಗೋದಾಮು ಕೈಮಗ್ಗ ಉತ್ಪನ್ನಗಳ ಉತ್ಪಾದನಾ ಕೇಂದ್ರ ವ್ಯಾಪಾರ ಮಳಿಗೆ ಆರಂಭಿಸಲಾಗಿದೆಹನಮಂತ ಮಾವಿನಮರದ ಅಧ್ಯಕ್ಷರು ಪಿಕೆಪಿಎಸ್ ಕೋಟೆಕಲ್
ಕೈಮಗ್ಗ ಉತ್ಪನ್ನಗಳ ಉತ್ಪಾದನಾ ಕೇಂದ್ರ ಕಮತಗಿ ರಸ್ತೆಗೆ ಹೊಂದಿಕೊಂಡಂತೆ 2024ರಲ್ಲಿ 3 ಎಕರೆ ಜಾಗ ಖರೀದಿಸಿ ಅದರಲ್ಲಿ 20 ಕೈಮಗ್ಗಗಳನ್ನು ಸ್ಥಾಪಿಸಿ ಒಟ್ಟು 30 ಜನರಿಗೆ ಕಾಯಂ ಉದ್ಯೋಗ ನೀಡಲಾಗಿದೆ. ಅವರಿಗೆ ಉತ್ತಮ ಸಂಭಾವನೆ ನೀಡಲಾಗುತ್ತಿದೆ. ಅಲ್ಲಿ ಖಣ ಮತ್ತು ರೇಷ್ಮೆ ಸೀರೆ ಕಾಟನ್ ಬಟ್ಟೆಗಳನ್ನು ನೇಯಲಾಗುತ್ತಿದ್ದು ಆನ್‍ಲೈನ್ ವ್ಯಾಪಾರ ಮಾಡಲಾಗುತ್ತಿದೆ. ಬೇರೇ ಬೇರೆ ರಾಜ್ಯಗಳಲ್ಲಿ ಜರುಗುವ ವ್ಯಾಪಾರ ವಾಣಿಜ್ಯ ಪ್ರದರ್ಶನದಲ್ಲಿ ಪಾಲ್ಗೊಂಡು ಮಾರಾಟ ಮಾಡಲಾಗುತ್ತದೆ. ಸ್ಥಳೀಯವಾಗಿಯೂ ಮಾರಾಟ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.