ADVERTISEMENT

'ಬರ್ರಿ ಪಾಸಾಗೋಣ...’ : SSL ಅನುತ್ತೀರ್ಣ ವಿದ್ಯಾರ್ಥಿಗಳಿಗೆವಿನೂತನ ಕಾರ್ಯಕ್ರಮ

ಶ್ರೀಧರ ಗೌಡರ
Published 19 ಫೆಬ್ರುವರಿ 2026, 6:52 IST
Last Updated 19 ಫೆಬ್ರುವರಿ 2026, 6:52 IST
ಕೂಡಲಸಂಗಮ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎರಡನೇ ಪೂರ್ವ ಸಿದ್ಧತಾ ಪರೀಕ್ಷೆ ಬರೆದ ವಿದ್ಯಾರ್ಥಿಗಳು
ಕೂಡಲಸಂಗಮ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎರಡನೇ ಪೂರ್ವ ಸಿದ್ಧತಾ ಪರೀಕ್ಷೆ ಬರೆದ ವಿದ್ಯಾರ್ಥಿಗಳು   

ಕೂಡಲಸಂಗಮ: ಎಸ್ಎಸ್ಎಲ್ ಸಿ ಫಲಿತಾಂಶ ಸುಧಾರಣೆಗಾಗಿ ಪೂರ್ವ ಸಿದ್ದತಾ ಪರೀಕ್ಷೆ-2ರಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ಹುನಗುಂದ-ಇಲಕಲ್ಲ ತಾಲ್ಲೂಕಿನ 6 ವಲಯದ 9 ಕೇಂದ್ರಗಳಲ್ಲಿ ಬರ್ರಿ ಪಾಸಾಗೋಣ ಎನ್ನುವ ವಿನೂತನವಾದ ಒಂದು ದಿನದ ಕಾರ್ಯಾಗಾರವನ್ನು ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಫೆ.19ರಂದು ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ಹಮ್ಮಿಕೊಂಡಿದ್ದಾರೆ.

ಶಿಕ್ಷಣ ಇಲಾಖೆ ಫಲಿತಾಂಶ ಸುಧಾರಣೆಗಾಗಿ 3 ಪೂರ್ವ ಸಿದ್ದತಾ ಪರೀಕ್ಷೆ ನಡೆಸಲು ಸೂಚಿಸಿದ್ದು, ಎರಡು ಪರೀಕ್ಷೆಗಳು ಮುಕ್ತಾಯಗೊಂಡಿವೆ. 3ನೇ ಪರೀಕ್ಷೆ ಇದೇ 23 ರಿಂದ 28ರ ವರೆಗೆ ನಡೆಯಲಿದೆ. ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಮಾಡುವ ಮೂಲಕ ಮೂರನೇ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವ ಗುರಿ ಇಟ್ಟುಕೊಂಡು ತರಬೇತಿ ಹಮ್ಮಿಕೊಂಡಿದ್ದಾರೆ.

ಕೂಡಲಸಂಗಮ ಸರ್ಕಾರಿ ಪ್ರೌಢ ಶಾಲೆ, ಕರಡಿ ಸರ್ಕಾರಿ ಪ್ರೌಢ ಶಾಲೆ, ಇಲ್ಲಕಲ್ಲದ ವಿಜಯ ಮಹಾಂತೇಶ ಪ್ರೌಢ ಶಾಲೆ, ಎಸ್.ಆರ್.ಕಂಠಿ ಬಾಲಕಿಯರ ಪ್ರೌಢ ಶಾಲೆ, ಹುನಗುಂದದ ವಿಜಯ ಮಹಾಂತೇಶ ಬಾಲಕರ ಪ್ರೌಢ ಶಾಲೆ, ಸೂಳೇಭಾವಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ, ಗುಡೂರ ಮಹಾತ್ಮಾಗಾಂಧಿ ಪ್ರೌಢ ಶಾಲೆ, ಕಮತಗಿ ಹುಚ್ಚೇಶ್ವರ ಪ್ರೌಢ ಶಾಲೆ, ಕದಗಲ್ಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅವಳಿ ತಾಲ್ಲೂಕಿನ 71 ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವರು.

ADVERTISEMENT

ಕನ್ನಡ, ಇಂಗ್ಲೀಷ, ಗಣಿತ, ವಿಜ್ಞಾನ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುವರು, ಬೆಳಿಗ್ಗೆ 2, ಮಧ್ಯಾಹ್ನ ಎರಡು ವಿಷಯಗಳ ತರಬೇತಿ ನಡೆಯುವುದು. 9 ಕೆಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಮೇಲ್ವಿಚಾರಣೆ ಮಾಡಲು ಸೂಚಿಸಿದ್ದಾರೆ.

ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಶಾಲಾವಾರು ಪಟ್ಟಿ ಮಾಡಿ ವಿಶಿಷ್ಟವಾಗಿ ಉತ್ತೀರ್ಣಗೊಳ್ಳಲು ಈ ತರಬೇತಿ ಹಮ್ಮಿಕೊಂಡಿದೆ
ಎ.ಎಂ. ಕಲ್ಯಾಣಿ ತಾಲ್ಲೂಕು ಎಸ್ಎಸ್ಎಲ್‌ಸಿ ನೋಡಲ್‌ ಅಧಿಕಾರಿ
- ಉತ್ತಮ ಫಲಿತಾಂಶಕ್ಕಾಗಿ ಜೂನ ತಿಂಗಳಿನಿಂದಲೇ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಅನುತ್ತೀರ್ಣ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ  ದೃಷ್ಟಿಯಿಂದ ಈ ತರಬೇತಿ ಹಮ್ಮಿಕೊಂಡಿದೆ
ಜಾಸ್ಮೀನ್ ಕಿಲ್ಲೆದಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹುನಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.