ADVERTISEMENT

ಹೆಚ್ಚುವರಿ ವಿದ್ಯುತ್ ಬಿಲ್ ಸರ್ಕಾರವೇ ಭರಿಸಲಿ: ಶಿವಲಿಂಗ ಟಿರಕಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 14:21 IST
Last Updated 2 ನವೆಂಬರ್ 2023, 14:21 IST
ಬನಹಟ್ಟಿಯಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಸದಸ್ಯರು ತಹಶೀಲ್ದಾರ್ ಗಿರೀಶ ಸ್ವಾದಿಯವರಿಗೆ ಮನವಿ ಸಲ್ಲಿಸಿದರು
ಬನಹಟ್ಟಿಯಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಸದಸ್ಯರು ತಹಶೀಲ್ದಾರ್ ಗಿರೀಶ ಸ್ವಾದಿಯವರಿಗೆ ಮನವಿ ಸಲ್ಲಿಸಿದರು   

ರಬಕವಿ ಬನಹಟ್ಟಿ: ‘ರಾಜ್ಯದಲ್ಲಿರುವ ನೇಕಾರರು ಆರೇಳು ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ. ಈ ಬಿಲ್ ಪಾವತಿಸಲು ನೇಕಾರರಿಂದ ಸಾಧ್ಯವಾಗುತ್ತಿಲ್ಲ. ನೇಕಾರರ ಬಾಕಿ ಇರುವ ವಿದ್ಯುತ್ ಬಿಲ್‌ನ್ನು ಸರ್ಕಾರವೇ ಭರಿಸಿದರೆ ನೇಕಾರರಿಗೆ ಅನುಕೂಲವಾಗಲಿದೆ’ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.

ಗುರುವಾರ ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಹಶೀಲ್ದಾರ್ ಗಿರೀಶ ಸ್ವಾದಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

‘ಇಲಾಖೆಯು ನೇಕಾರರಿಗೆ ಮೊದಲಿನಂತೆ ₹1.25 ಬಿಲ್ ಪಾವತಿಸಲು ಅನುಕೂಲ ಮಾಡಿಕೊಡಬೇಕು. ಹೆಚ್ಚುವರಿ ಬಿಲ್ ತುಂಬಲು ಸಾಧ್ಯವಾಗುವುದೇ ಇಲ್ಲ. ಬನಹಟ್ಟಿಯಲ್ಲಿರುವ ನೇಕಾರರ ವಿದ್ಯುತ್ ಬಿಲ್ ಅಂದಾಜು ₹1.50 ಕೋಟಿಯಷ್ಟಾಗುತ್ತದೆ. ಸರ್ಕಾರ ನೇಕಾರರ ವಿದ್ಯುತ್ ಬಿಲ್ ಪಾವತಿಸುವುದರಿಂದ ನೇಕಾರರಿಗೆ ಆರ್ಥಿಕವಾಗಿ ಸಹಾಯವಾಗಲಿದೆ. ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನೇಕಾರರ ಹಕ್ಕೊತ್ತಾಯಗಳಿಗೆ ಬೃಹತ್ ಹೋರಾಟ ಮಾಡಲಾಗುವುದು. ಸರ್ಕಾರ ಜವಳಿ ಇಲಾಖೆಗೆ ₹1,500 ಕೋಟಿ ಅನುದಾನ ನೀಡುವುದರ ಮೂಲಕ ನೇಕಾರ ಮತ್ತು ನೇಕಾರಿಕೆಯ ಉದ್ಯೋಗವನ್ನು ಉತ್ತೇಜಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಿ.ಆರ್ ಕರಲಟ್ಟಿ, ಎಸ್.ಎಸ್. ಉದಗಟ್ಟಿ, ಎಸ್.ಬಿ.ದೊಡ್ಡಮನಿ, ಮಲ್ಲಪ್ಪ ಮಿರ್ಜಿ, ಗಂಗಪ್ಪ ಟಿರ್ಕಿ, ಮಹಾಂತೇಶ ಹುಣಶ್ಯಾಳ, ಉದಯ ಕುಲಗೋಡ, ರುದ್ರಪ್ಪ ಹಳ್ಯಾಳ, ಕಾಡಿ ಕಡ್ಲಿ, ಬಸವರಾಜ ಮಾಂತನ್ನವರ, ಚಿನ್ನಪ್ಪ ಶೇಗುಣಸಿ, ಮಹಾಲಿಂಗ ಬೆಳ್ಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.