ADVERTISEMENT

ಲೋಕಸಭೆ ಚುನಾವಣೆ: ಕಟೌಟ್, ಬ್ಯಾನರ್ ತೆರವು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 15:54 IST
Last Updated 16 ಮಾರ್ಚ್ 2024, 15:54 IST
ತೇರದಾಳ ಪುರಸಭೆ ವ್ಯಾಪ್ತಿಯಲ್ಲಿನ ಜವಳಿ ಬಜಾರ್‌ನಲ್ಲಿ ಅಳವಡಿಸಲಾಗಿದ್ದ ಧ್ವಜ, ಬ್ಯಾನರ್ ಹಾಗೂ ಕಟೌಟ್‌ಗಳನ್ನು ಪುರಸಭೆ ಪೌರಕಾರ್ಮಿಕರು ತೆರವುಗೊಳಿಸಿದರು
ತೇರದಾಳ ಪುರಸಭೆ ವ್ಯಾಪ್ತಿಯಲ್ಲಿನ ಜವಳಿ ಬಜಾರ್‌ನಲ್ಲಿ ಅಳವಡಿಸಲಾಗಿದ್ದ ಧ್ವಜ, ಬ್ಯಾನರ್ ಹಾಗೂ ಕಟೌಟ್‌ಗಳನ್ನು ಪುರಸಭೆ ಪೌರಕಾರ್ಮಿಕರು ತೆರವುಗೊಳಿಸಿದರು   

ತೇರದಾಳ: ಲೋಕಸಭಾ ಚುನಾವಣೆ ದಿನಾಂಕ ನಿಗದಿ ಹಾಗೂ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಪುರಸಭೆ ಪೌರಕಾರ್ಮಿಕರು ಪಟ್ಟಣದಲ್ಲಿ ಅಳವಡಿಸಲಾಗಿದ್ದ ಬ್ಯಾನರ್, ಕಟೌಟ್‌ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿರುವ ಅನೇಕ ಪ್ರಚಾರ ಸಾಮಗ್ರಿಗಳನ್ನು  ಶನಿವಾರ ತೆರವುಗೊಳಿಸಿದರು.

ರಾಜಕೀಯ ಪಕ್ಷಗಳ ವಿವಿಧ ಕಾರ್ಯಕ್ರಮಗಳ ಪ್ರಚಾರದ ಭಿತ್ತಿ ಚಿತ್ರಗಳುಳ್ಳ ಗೊಡೆಬರಹಗಳಿಗೂ ಬಣ್ಣ ಬಳಿಯಲಾಯಿತು. ನಗರದಲ್ಲೀಗ ಸ್ವಚ್ಛ ವಾತಾವರಣ ಕಾಣುವಂತಾಗಿದೆ.

ಮುಖ್ಯಾಧಿಕಾರಿ ಮಾಲಿನಿ, ‘ಚುನಾವಣೆ ಹಿನ್ನಲೆಯಲ್ಲಿ ಮೇಲಾಧಿಕಾರಿಗಳ ಸಭೆಯಲ್ಲಿ ಸೂಚಿಸಿದಂತೆ ಬ್ಯಾನರ್ ಸೇರಿದಂತೆ ವಿವಿಧ ವಸ್ತುಗಳ ತೆರವು ಕಾರ್ಯ ನಡೆಯುತ್ತಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.