ADVERTISEMENT

ಮಹಾಲಿಂಗಪುರ: ರನ್ನ ರಥಯಾತ್ರೆಗೆ ಅದ್ಧೂರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 12:50 IST
Last Updated 13 ಫೆಬ್ರುವರಿ 2025, 12:50 IST
ರನ್ನ ವೈಭವದ ಅಂಗವಾಗಿ ಮಹಾಲಿಂಗಪುರಕ್ಕೆ ಆಗಮಿಸಿದ ರನ್ನ ರಥಯಾತ್ರೆಯನ್ನು ಬಸವೇಶ್ವರ ವೃತ್ತದಲ್ಲಿ ಶಾಸಕ ಸಿದ್ದು ಸವದಿ ಸ್ವಾಗತಿಸಿದರು
ರನ್ನ ವೈಭವದ ಅಂಗವಾಗಿ ಮಹಾಲಿಂಗಪುರಕ್ಕೆ ಆಗಮಿಸಿದ ರನ್ನ ರಥಯಾತ್ರೆಯನ್ನು ಬಸವೇಶ್ವರ ವೃತ್ತದಲ್ಲಿ ಶಾಸಕ ಸಿದ್ದು ಸವದಿ ಸ್ವಾಗತಿಸಿದರು   

ಮಹಾಲಿಂಗಪುರ: ರನ್ನ ವೈಭವದ ಅಂಗವಾಗಿ ಮುಧೋಳ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಲಿರುವ ರನ್ನ ರಥಯಾತ್ರೆಗೆ ಸಮೀಪದ ರನ್ನಬೆಳಗಲಿ ಪಟ್ಟಣದಲ್ಲಿ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಗುರುವಾರ ಅದ್ಧೂರಿಯಾಗಿ ಚಾಲನೆ ನೀಡಿದರು.

ಬಂದಲಕ್ಷ್ಮೀ ದೇವಿ ದೇವಸ್ಥಾನದ ಬಳಿ ಸಿದ್ಧರಾಮ ಶಿವಯೋಗಿ ಅವರು ರನ್ನನ ಮೂರ್ತಿಗೆ ಪೂಜೆ ಸಲ್ಲಿಸಿದರು. ರನ್ನ ರಥ ಸಮಿತಿ ಸದಸ್ಯರಿಂದ ರನ್ನನ ಗದೆಯನ್ನು ಹಸ್ತಾಂತರ ಮಾಡಿಕೊಂಡ ಸಚಿವ ತಿಮ್ಮಾಪುರ ಅದನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುವ ಮೂಲಕ ರಥಕ್ಕೆ ಚಾಲನೆ ನೀಡಿದರು.

ಪ್ರಮುಖ ಮಾರ್ಗಗಳ ಮೂಲಕ ಮಹಾಲಿಂಗಪುರದತ್ತ ರಥಯಾತ್ರೆ ಸಾಗಿತು. ಜಾಂಜ್ ಪಥಕ್, ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯ ಮೇಳಗಳು ಕಳೆಕಟ್ಟಿದವು.

ADVERTISEMENT

ಮಹಾಲಿಂಗಪುರಕ್ಕೆ ಆಗಮಿಸಿದ ರಥಯಾತ್ರೆಗೆ ಬಸವೇಶ್ವರ ವೃತ್ತದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸ್ವಾಗತ ಕೋರಿದರು. ನಂತರ ಬುದ್ನಿ ಪಿಡಿ, ಕೆಸರಗೊಪ್ಪ, ಬಿಸನಾಳ, ಸೈದಾಪುರ ಗ್ರಾಮಗಳಲ್ಲಿ ಸಂಚರಿಸಿ ಮದಭಾಂವಿ ಗ್ರಾಮಕ್ಕೆ ತಲುಪಿತು. ಫೆ.21ರ ವರೆಗೆ ವಿವಿಧ ಗ್ರಾಮಗಳಲ್ಲಿ ರಥಯಾತ್ರೆ ಸಂಚರಿಸಿ ಮರಳಿ ರನ್ನ ಬೆಳಗಲಿ ತಲುಪಲಿದೆ.

ಶಾಸಕ ಸಿದ್ದು ಸವದಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ರನ್ನಬೆಳಗಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೂಪಾ ಹೊಸಟ್ಟಿ, ಉಪಾಧ್ಯಕ್ಷೆ ಸಹನಾ ಸಾಂಗಲೀಕರ, ಮುಖ್ಯಾಧಿಕಾರಿ ಎನ್.ಎ.ಲಮಾಣಿ, ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಮುಖಂಡರು, ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.