ಮಹಾಲಿಂಗಪುರ: ಕಬ್ಬು ಕಟಾವು ಮುಗಿಯುವ ಈ ಸಂದರ್ಭದಲ್ಲಿ ಕಬ್ಬಿನ ಗ್ಯಾಂಗ್‌ನವರು ತರಹೇವಾರಿ ಸಾಹಸ ಮಾಡುವುದು ಸಾಮಾನ್ಯ. ಸಮೀಪದ ನಾಗರಾಳ ಗ್ರಾಮದಲ್ಲಿ ಕಬ್ಬು ಹೇರಿದ 16 ಡಬ್ಬಿಗಳನ್ನು ಎರಡು ಟ್ರ್ಯಾಕ್ಟರ್‌ಗೆ ಜೋಡಿಸಿ 1 ಕಿ.ಮೀ.ವರೆಗೆ ಸಾಗಿಸಿ ಶುಕ್ರವಾರ ಸಾಹಸ ಮಾಡಿದ್ದಾರೆ.
ನಾಗರಾಳ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸರ್ಕಾರಿ ಪ್ರೌಢಶಾಲೆ ವರೆಗಿನ 1 ಕಿ.ಮೀ. ಅಂತರದ ದಿಬ್ಬನ್ನು ಕಬ್ಬು ಹೇರಿದ ಹೆಚ್ಚಿನ ಸಂಖ್ಯೆಯ ಡಬ್ಬಿಗಳನ್ನು ಏಕಕಾಲಕ್ಕೆ ಟ್ರ್ಯಾಕ್ಟರ್‌ಗೆ ಜೋಡಿಸಿ ದಾಟಿಸಲು 20ಕ್ಕೂ ಹೆಚ್ಚಿನ ಕಬ್ಬಿನ ಗ್ಯಾಂಗ್‍ನವರು ಪರಸ್ಪರ ಸ್ಪರ್ಧೆ ಏರ್ಪಡಿಸಿದ್ದರು. ಇದರನ್ವಯ ಮೂರ್ನಾಲ್ಕು ದಿನದಿಂದ ಐದರಿಂದ ಎಂಟು ಡಬ್ಬಿ ಸಾಗಿಸಿ ಕೆಲವರು ಸಾಹಸ ಮಾಡಿದ್ದರು.
ಗ್ರಾಮದ ಬಸಯ್ಯ ಹಿರೇಮಠ ಅವರ ಮಾಲೀಕತ್ವದ ಎರಡು ಟ್ರಾಕ್ಟರ್‌ಗೆ ಕಬ್ಬು ಹೇರಿದ 16 ಡಬ್ಬಿಗಳನ್ನು ಏಕಕಾಲಕ್ಕೆ ಜೋಡಿಸಿದ ವೆಂಕಪ್ಪ ಕುರಬರ ಗ್ಯಾಂಗ್‌ನವರು ಒಂದು ಜೆಸಿಬಿ ಸಹಾಯದಿಂದ ದಿಬ್ಬನ್ನು ದಾಟಿಸಿ ಸಾಹಸ ಮೆರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.