
ಹುನಗುಂದ: ಸರ್ಕಾರ ಗ್ರಾಮೀಣ ಪ್ರದೇಶಗಳ ರಸ್ತೆ ಸೇರಿದಂತೆ ಮೂಲಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ತಾಲ್ಲೂಕಿನ ಹಾವರಗಿ ಗ್ರಾಮದಲ್ಲಿ ಪ್ರಸಕ್ತ 2025-26 ಸಾಲಿನ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆ, ಸೇತುವೆಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಭಾಗದಲ್ಲಿ ಮುಖ್ಯ ರಸ್ತೆಗಳು ಆಗಿಲ್ಲ ಎನ್ನುವ ಕೂಗು ಕಳೆದ ಹತ್ತು ವರ್ಷಗಳಿಂದ ಇತ್ತು. ಗ್ರಾಮದ ಬೇಡಿಕೆಗಳಾದ ಸಿಸಿ ರಸ್ತೆ, ಗ್ರಾಮದಿಂದ ಕೃಷ್ಣ ನದಿಯವರೆಗೆ ರಸ್ತೆ ಸುಧಾರಣೆ, ಹಾವರಗಿ- ಜಾಲಕಮಲದಿನ್ನಿ ಸಂಪರ್ಕಿಸುವ ರಸ್ತೆ ಸುಧಾರಣೆ ಕಾಮಗಾರಿಯೂ ಸೇರಿದಂತೆ ಜಿಲ್ಲಾ ಪಂಚಾಯತ್ ಮತ್ತು ಲೋಕೋಪಯೋಗಿ ಇಲಾಖೆಯಿಂದ ಒಟ್ಟು ₹ 5 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ತಾಲ್ಲೂಕಿನ 170 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದೆ. ಕೌಜಗನೂರ, ಇಂದವಾರ, ಮರೋಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮುಖಂಡ ವೈ. ಎಚ್. ಪಾಟೀಲ ಮಾತನಾಡಿದರು. ಶರಣಪ್ಪ ಆಲೂರ, ಮಹಾಂತೇಶ ಕಾಶಪ್ಪನವರ, ಸಂಗಯ್ಯ ಶಿವಮೂರ್ತಿ, ಸುಭಾಷ್ ನಾಗರಾಳ, ಸಂತೋಷ ಕಾಶಪ್ಪನವರ, ಬಸವರಾಜ ಬೇವಿನಮಟ್ಟಿ, ಹುಚ್ಚಯ್ಯ ಹಿರೇಮಠ, ಮಲ್ಲನಗೌಡ ಗೌಡರ ಅಧಿಕಾರಿಗಳಾದ ವೀರಯ್ಯ ಹಿರೇಮಠ, ಕೆ. ಡಿ. ನಾಯಕ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.