ADVERTISEMENT

ಬಾಗಲಕೋಟೆ ಗ್ರಾಮ ಪಂಚಾಯಿತಿ: ತಾಯಿ-ಮಗ ಗೆಲುವು, ದಂಪತಿಗೆ ಸೋಲು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 13:28 IST
Last Updated 30 ಡಿಸೆಂಬರ್ 2020, 13:28 IST
ಬಾದಾಮಿ ಪಟ್ಟಣದಲ್ಲಿ ಮತ ಎಣಿಕೆ ಕೇಂದ್ರದ ಎದುರು ನೆರೆದಿದ್ದ ಜನಸ್ತೋಮ
ಬಾದಾಮಿ ಪಟ್ಟಣದಲ್ಲಿ ಮತ ಎಣಿಕೆ ಕೇಂದ್ರದ ಎದುರು ನೆರೆದಿದ್ದ ಜನಸ್ತೋಮ   

ಬಾಗಲಕೋಟೆ: ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಮತ ಎಣಿಕೆ ಕಾರ್ಯ ತಡರಾತ್ರಿಯವರೆಗೂ ಮುಂದುವರೆದಿತ್ತು. ಸಂಜೆ 4ರವರೆಗೂ ಜಿಲ್ಲೆಯ 198 ಗ್ರಾಮ ಪಂಚಾಯ್ತಿಗಳ ಪೈಕಿ 11ರ ಫಲಿತಾಂಶ ಮಾತ್ರ ಪ್ರಕಟವಾಗಿತ್ತು. ಈ ಬಾರಿಯ ಚುನಾವಣೆ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಯಿತು.

ಸಂಬಂಧಿಗಳ ಸೋಲು–ಗೆಲುವು:ಇಳಕಲ್ ತಾಲ್ಲೂಕಿನ ಓತಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋನಾಳ ಗ್ರಾಮದಲ್ಲಿ ಅಮ್ಮ–ಮಗ ಗೆಲುವು ಸಾಧಿಸಿದರು. ಹನಮವ್ವ ಕುರಿ ಹಾಗೂ ಆಕೆಯ ಪುತ್ರ ದೊಡ್ಡಪ್ಪ ಕುರಿ ಗೆದ್ದವರು. ಹುನಗುಂದ ತಾಲ್ಲೂಕಿನ ರಕ್ಕಸಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನರಹಳ್ಳಿಯಲ್ಲಿ ವೀರನಗೌಡ ಮಾಗಿ ಹಾಗೂ ಗಂಗಮ್ಮ ದಂಪತಿ ಸ್ಪರ್ಧಿಸಿದ್ದರು. ವೀರನಗೌಡ ಗೆಲುವು ಸಾಧಿಸಿದರೆ, ಗಂಗಮ್ಮನಿಗೆ ಆ ಭಾಗ್ಯ ಸಿಗಲಿಲ್ಲ. ಹಿರೇಮಳಗಾವಿ ಗ್ರಾಮ ಪಂಚಾಯ್ತಿಯ ವಾರ್ಡ್ ನಂ 1 ಹಾಗೂ 2ರಲ್ಲಿ ಸ್ಪರ್ಧಿಸಿದ್ದ ಪತಿ ಹಾಗೂ ಪತ್ನಿ ಇಬ್ಬರೂ ಸೋಲನ್ನಪ್ಪಿದ್ದಾರೆ. ಮುಧೋಳ ತಾಲ್ಲೂಕಿನ ಸೋರಗಾವಿಯಲ್ಲಿ ಚಿಕ್ಕಮ್ಮ ಸವಿತಾ ಅಡವಿ ಹಾಗೂ ಪುತ್ರ ವಿನೋದ ಅಡವಿ ಇಬ್ಬರೂ ಗೆಲುವು ಸಾಧಿಸಿದ್ದಾರೆ.

ಒಂದು ಮತದ ಅಂತರದ ಗೆಲುವು:ಹುನಗುಂದ ತಾಲ್ಲೂಕಿನ ಹಿರೇಮಳಗಾವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಮಳಗಾವಿಯಲ್ಲಿ ಕೆಂಚಪ್ಪ ವಾಲೀಕಾರ, ಮರೋಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಲ್ಲಳ್ಳಿ ಗ್ರಾಮದ ಆನಂದಗೌಡ ಗೌಡ್ರ, ರಬಕವಿ–ಬನಹಟ್ಟಿ ತಾಲ್ಲೂಕಿನ ಗೋಲಭಾವಿಯಲ್ಲಿ ಕಲಾವತಿ ಮಾಂಗ. ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿಯಲ್ಲಿ ಶಾಂತವ್ವಾ ಮಾದರ.

ADVERTISEMENT

ಲಾಟರಿಯಲ್ಲಿ ಗೆದ್ದವರು:ಸಮ ಮತಗಳು ಬಿದ್ದ ಕಾರಣ ಇಳಕಲ್ ತಾಲ್ಲೂಕಿನ ಗೋಪಶಾನಿ ಗ್ರಾಮದಲ್ಲಿ ಮಹಾಂತೇಶ, ಬಾದಾಮಿ ತಾಲ್ಲೂಕಿನ ಕೈನಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಂಗವಾಡ ಗ್ರಾಮದ ರಸೂಲ್‌ಬಿ ಮುಲ್ಲಾ, ಮುಧೋಳ ತಾಲ್ಲೂಕಿನ ಸೋರಗಾವಿಯಲ್ಲಿ ಲಕ್ಷ್ಮಣ ಹೆರಕಣ್ಣವರ, ಗುಳೇದಗುಡ್ಡ ತಾಲ್ಲೂಕಿನ ಹಾನಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುರಡಿ ಗ್ರಾಮದ ಶಿಲ್ಪಾ ದಾಸರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.