
ಮುಧೋಳ: ನಗರದಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ವೇಳೆ ಹಾಗೂ ಇತರ ಮಾಹಿತಿ ವಿಚಾರಿಸಲು ಇರುವ ವಿಚಾರಣಾ ಕೇಂದ್ರ ಅವೈಜ್ಞಾನಿಕವಾಗಿದ್ದು ಜನಸಾಮಾನ್ಯರಿಗೆ ಸಮಸ್ಯೆ ಉಂಟು ಮಾಡಿದೆ.
ಕಂಟ್ರೋಲರ್ ಬಳಿ ಯಾವುದೇ ಮಾಹಿತಿ ಕೇಳಲು ಅರ್ಧದಷ್ಟು ಬಗ್ಗಿ ನಿಂತರೇ ಮಾತ್ರ ಮಾತನಾಡಿದ್ದು ಸರಿಯಾಗಿ ಕೇಳಿಸುತ್ತದೆ. ಹಾಗೂ ಕಂಟ್ರೋಲರ್ ಹೇಳಿದ್ದು ಪ್ರಯಾಣಿಕರಿಗೆ ಕೇಳಿಸುತ್ತದೆ. ಸುತ್ತೆಲ್ಲ ಗ್ಲಾಸ್ ಹಾಕಿರುವುದರಿಂದ ನಿಂತು ಮಾತನಾಡಿದರೆ ಪರಸ್ಪರ ಮಾತು ಕೇಳಿಸುವುದಿಲ್ಲ.
ನಿತ್ಯ ಸಾವಿರಾರು ಪ್ರಯಾಣಿಕರು ಆಗಮಿಸುವ ನಿಲ್ದಾಣದಲ್ಲಿ ಹೀಗೆ ಬಗ್ಗಿ ನಿಂತು ಮಾತನಾಡಲು ಮಹಿಳೆಯರು, ವೃದ್ಧರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿದ್ದು, ಬಗ್ಗಿ ನಿಂತು ವಿಚಾರಿಸಬೇಕಾದ ಕಾರಣ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಎಸ್‍ಆರ್‌ಟಿಸಿಯ ಜಿಲ್ಲೆಯ ಅಧಿಕಾರಿಗಳಿಗೆ, ಸ್ಥಳೀಯ ಡಿಪೊ ವ್ಯವಸ್ಥಾಪಕರಿಗೆ ಹಲವು ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ತಿಂಗಳಲ್ಲಿ ಇದನ್ನು ಸರಿಪಡಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಭೀಮ ಆರ್ಮಿ ಮುಖಂಡ ಸುನೀಲ ಕಂಬೋಗಿ ಹಾಗೂ ಸಮಾಜ ಸೇವಕ ಹಣಮಂತ ಅಡವಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.