
ಮಹಾಲಿಂಗಪುರ: ‘ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಸತತ ಪರಿಶ್ರಮದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಣಿತ ಕ್ಷೇತ್ರವನ್ನು ಹಿರಿದಾಗಿಸುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಗಣಿತ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ’ ಎಂದು ಆರ್ಥಿಕ ತಜ್ಞ ಶಿವಪ್ಪ ನೇಸೂರ ಹೇಳಿದರು.
ಪಟ್ಟಣದ ಜೇಸಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಲ್ಲ ವಿಷಯಗಳಿಗೆ ಗಣಿತ ಮೂಲವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಗಣಿತದಲ್ಲಿ ಹೆಚ್ಚು ಆಸಕ್ತಿ ವಹಿಸುವ ಮೂಲಕ ಸಾಧನೆ ಮಾಡಬಹುದು. ಗಣಿತ ಕ್ಷೇತ್ರದಲ್ಲಿ ಸಾಧನೆ ಮಾಡಲು ಆಸಕ್ತಿ ಮುಖ್ಯವಾಗಿದೆ. ರಾಮಾನುಜನ್ ಅವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದರೂ ಅವರಿಗೆ ಗಣಿತ ವಿಷಯದಲ್ಲಿದ್ದ ಆಸಕ್ತಿಯಿಂದಾಗಿ ವಿಶ್ವವೇ ಗುರುತಿಸುವಂಥ ಸಾಧನೆ ಮಾಡಿದರು’ ಎಂದರು.
ಅಮೀತ ಬೀಳಗಿ ಮಾತನಾಡಿದರು. ಶ್ರೀನಿವಾಸ ರಾಮಾನುಜನ್ ಅವರ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಗಣಿತ ವಸ್ತುಪ್ರದರ್ಶನ ಗಮನಸೆಳೆಯಿತು. ವಿದ್ಯಾರ್ಥಿಗಳು ಗಣಿತದ ಸಾಕಷ್ಟು ಚಿತ್ರ ಸಹಿತ ಮಾಹಿತಿಯನ್ನು ನೀಡಿದರು. ಶಿವಾನಂದ ತಿಪ್ಪಾ, ಈಶ್ವರ ಮುರಗೋಡ, ಗಂಗಾಧರ ಮೇಟಿ, ಮುಖ್ಯಶಿಕ್ಷಕ ಎಸ್.ಜಿ.ಕೌಜಲಗಿ, ಗಣಿತ ಶಿಕ್ಷಕ ಎಸ್.ಬಿ.ಮಟಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.