ಬಾಗಲಕೋಟೆ: ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ದಸರಾ ಹಬ್ಬದ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಬಾದಾಮಿಯ ಬನಶಂಕರಿ ದೇವಸ್ಥಾನ, ಸೀತಿಮನಿಯ ಸೀತಾಚಲವಾಸ ವೆಂಕಟೇಶ್ವರ ದೇವಸ್ಥಾನ, ಬೇವೂರು ಗ್ರಾಮದ ಕಾಳಿಕಾಂಬಾ ದೇವಸ್ಥಾನ, ನವನಗರದ ಅಂಬಾಭವಾನಿ ಸೇರಿದಂತೆ ವಿವಿಧೆಡೆ ಘಟಸ್ಥಾಪನೆ, ದೀಪ ಪ್ರಜ್ವಲನೆ ಸೇರಿದಂತೆ ವಿವಿಧ ಪೂಜೆಗಳು ನಡೆಯಲಿವೆ.
ಬಾವಸಾರ ಕ್ಷತ್ರೀಯ ಸಮಾಜದ ಅಂಬಾಭವಾನಿ ಮಂದಿರ ಟ್ರಸ್ಟ್ ವತಿಯಿಂದ ಅಂಬಾಭವಾನಿ ದೇವಸ್ಥಾನದಲ್ಲಿ ಸೆ.22 ರಿಂದ ನವರಾತ್ರಿ ಉತ್ಸವ ಆಚರಿಸಲಾಗುತ್ತದೆ.
ಸೋಮವಾರ ಘಟಸ್ಥಾಪನೆ, ಒಂಬತ್ತು ದಿನಗಳ ಕಾಲ ದೀಪ ಪ್ರಜ್ವಲನೆ, ಸೆ.30 ದುರ್ಗಾಷ್ಟಮಿ, ಅ.1ರಂದು ಖಂಡೆಪೂಜಾ ಕಾರ್ಯಕ್ರಮ ನಡೆಯಲಿದೆ.
ಅ.2ರ ವಿಜಯ ದಶಮಿಯಂದು ಸಂಜೆ 4ಕ್ಕೆ ಅಂಬಾಭವಾನಿ ದೇವಸ್ಥಾನದಿಂದ ದೇವಿಯ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ.
ಸೆ.28ರಂದು ಮಧ್ಯಾಹ್ನ 3.30ಕ್ಕೆ ಶಕ್ತಿ ಮಹಿಳಾ ಮಂಡಳದಿಂದ ದಾಂಡಿಯಾ ಮತ್ತು ಚಿಕ್ಕ ಮಕ್ಕಳ ವೇಷಭೂಷಣ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.