
ಇಳಕಲ್: ಕುರುಹಿನಶೆಟ್ಟಿ ಸಮಾಜದಿಂದ ನೀಲಕಂಠೇಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವದ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಮೆರವಣಿಗೆಯಲ್ಲಿ ವಿವಿಧ ವಾದ್ಯಗಳೊಂದಿಗೆ ಬನ್ನಿಕಟ್ಟಿಯ ನೀಲಕಂಠೇಶ್ವರ ದೇವಸ್ಥಾನದಿಂದ ಪಾರಂಭಗೊಂಡ ಮೆರವಣೆಗೆಯು ಪೊಲೀಸ್ ಮೈದಾನ, 10ನೇ ನಂ. ಶಾಲೆ, ಮಹಾಂತೇಶ ಚಿತ್ರಮಂದಿರ, ಸಾಲಪೇಟೆಯ ಬನಶಂಕರಿ ದೇವಸ್ಥಾನ, ಗುಬ್ಬಿಪೇಟೆಯ ಶಂಕರಿ ರಾಮಲಿಂಗ ದೇವಸ್ಥಾನ, ಹಳೆ ಮುನಸಿಪಾಲ್ಟಿ, ಗಾಂಧಿ ಚೌಕ್, ವಿಜಯ ಮಹಾಂತೇಶ್ವರ ಮಠ, ವೆಂಕಟೇಶ್ವರ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ರಾಮಮಂದಿರ, ಕೊಪ್ಪರದ ಪೇಟೆಯ ಹೊಸ ಬನಶಂಕರಿ ದೇವಸ್ಥಾನ, ಪಶು ಚಿಕಿತ್ಸಾಲಯ, ಅಂಬಾಭವಾನಿ ದೇವಸ್ಥಾನ ಮಾರ್ಗವಾಗಿ ನೀಲಕಂಠೇಶ್ವರ ದೇವಸ್ಥಾನ ತಲುಪಿತು.
ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮೆರವಣಿಗೆಯ ಮಾರ್ಗ ಮಧ್ಯದಲ್ಲಿ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ಮಹಿಳೆಯರು ಕಳಸದಾರತಿಯೊಂದಿಗೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.