ADVERTISEMENT

ಹೊಸ ತಾಲ್ಲೂಕು ರಚನೆ: ಕೊನೆಗೂ ಅಧಿಸೂಚನೆ

ಗುಳೇದಗುಡ್ಡ, ಇಳಕಲ್, ರಬಕವಿ–ಬನಹಟ್ಟಿ ನೂತನ ತಾಲ್ಲೂಕುಗಳ ವ್ಯಾಪ್ತಿ

ವೆಂಕಟೇಶ್ ಜಿ.ಎಚ್
Published 11 ನವೆಂಬರ್ 2019, 17:30 IST
Last Updated 11 ನವೆಂಬರ್ 2019, 17:30 IST
ಗಂಗೂಬಾಯಿ ಮಾನಕರ, ಜಿಲ್ಲಾ ಪಂಚಾಯ್ತಿ ಸಿಇಒ 
ಗಂಗೂಬಾಯಿ ಮಾನಕರ, ಜಿಲ್ಲಾ ಪಂಚಾಯ್ತಿ ಸಿಇಒ    

ಬಾಗಲಕೋಟೆ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗುಳೇದಗುಡ್ಡ, ಇಳಕಲ್ ಹಾಗೂ ರಬಕವಿ–ಬನಹಟ್ಟಿಗೆ ತಾಲ್ಲೂಕುಗಳಿಗೆ ಸೀಮಿತವಾಗಿ ನೂತನ ತಾಲ್ಲೂಕು ಪಂಚಾಯ್ತಿ ರಚನೆಗೆ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಇದರಿಂದನೂತನ ತಾಲ್ಲೂಕುಗಳು ರಚನೆಯಾಗಿ ವರ್ಷ ಕಳೆಯುತ್ತಾ ಬಂದರೂ ಅವಿನ್ನೂ ಸ್ವತಂತ್ರ ರೂಪ ಪಡೆದಿಲ್ಲ ಎಂಬ ಅಳಲಿಗೆ ಸರ್ಕಾರ ಸ್ಪಂದಿಸಿದಂತಾಗಿದೆ.

ಅಕ್ಟೋಬರ್ 14ರಿಂದ ಜಾರಿಗೆ ಬರುವಂತೆ ನೂತನ ತಾಲ್ಲೂಕು ಪಂಚಾಯ್ತಿಗಳ ರಚನೆಯನ್ನು ಸರ್ಕಾರ ಘೋಷಿಸಿದೆ. ಬಾದಾಮಿ ತಾಲ್ಲೂಕಿನ 38 ಹಳ್ಳಿಗಳನ್ನು ಸೇರಿಸಿಗುಳೇದಗುಡ್ಡ ತಾಲ್ಲೂಕು ಪಂಚಾಯ್ತಿಯ ವ್ಯಾಪ್ತಿ ರೂಪುಗೊಂಡಿದೆ. ಹುನಗುಂದ ತಾಲ್ಲೂಕಿನ 73 ಹಳ್ಳಿಗಳನ್ನು ಸೇರಿಸಿ ಇಳಕಲ್ ತಾಲ್ಲೂಕು ಪಂಚಾಯ್ತಿ ರಚನೆಗೊಂಡಿದೆ. ರಬಕವಿ–ಬನಹಟ್ಟಿ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಗೆ ಜಮಖಂಡಿಯ 21 ಹಾಗೂ ಮುಧೋಳ ತಾಲ್ಲೂಕಿನ 10 ಗ್ರಾಮಗಳು ಸೇರ್ಪಡೆಯಾಗಿವೆ.

ADVERTISEMENT

ಗುಳೇದಗುಡ್ಡ ತಾ.ಪಂ ವ್ಯಾಪ್ತಿ ಗ್ರಾಮಗಳು:

ಖಾನಾಪುರ ಎಸ್‌.ಪಿ, ಹಂಸನೂರು, ಪಡನಕಟ್ಟಿ, ಲಕ್ಕಸಕೊಪ್ಪ, ಹಳದೂರು, ಬೂದನಗಡ, ಮಂಗಳಗಡ್ಡ, ಕೊಟ್ನಳ್ಳಿ, ಕಟಗಿನಹಳ್ಳಿ, ಅಸಂಗಿ, ಕಾಟಾಪುರ, ಕೆಲವಡಿ, ಹಿರೇಬೂದಿಹಾಳ, ತಿಮ್ಮಸಾಗರ, ಲಿಂಗಾಪುರ, ಕಟಗೇರಿ, ಹಂಗರಗಿ, ಖಾಜಿಬೂದಿಹಾಳ, ಅಲ್ಲೂರ ಎಸ್‌ಪಿ, ತೆಗ್ಗಿ, ಕೊಂಕಣಕೊಪ್ಪ, ಜಮ್ಮನಕಟ್ಟಿ, ಹುಲಸಗೇರಿ, ನಾಗರಾಳ ಎಸ್‌.ಪಿ, ಇಂಜಿನವಾರಿ, ಹರದೊಳ್ಳಿ, ಚಿಮ್ಮಲಗಿ, ಮುರಡಿ, ತೋಗುಣಸಿ, ಹಾನಾಪುರ ಎಸ್‌.ಪಿ, ಹಳ್ಳಿಕೇರಿ ಎಸ್‌.ಪಿ, ಪರ್ವತಿ, ಕೋಟಿಕಲ್, ಸಬ್ಬಲಹುಣಸಿ, ಲಾಯದಗುಂದಿ, ರಾಗಾಪುರ, ತೋಗುಣಸಿ ತಾಂಡಾ, ಹಳ್ಳಿಕೇರಿ ತಾಂಡಾ.

ರಬಕವಿ–ಬನಹಟ್ಟಿ ತಾ.ಪಂ:

ತೆರದಾಳ, ಕಲ್ಲಟ್ಟಿ, ತಮದಡ್ಡಿ, ಹಳಿಂಗಳಿ, ಗೋಲಭಾವಿ, ಕಾಲತಿಪ್ಪಿ, ಸಸಾಲಟ್ಟಿ, ಹನಗಂಡಿ, ಚಿಮ್ಮಡ, ಯರಗಟ್ಟಿ, ರಬಕವಿ, ಬನಹಟ್ಟಿ, ಹೊಸೂರು, ಜಗದಾಳ, ನಾವಲಗಿ, ಬಂದಿಗಾನಿ, ಯಲ್ಲಟ್ಟಿ, ಅಸಂಗಿ, ಮದನಮಟ್ಟಿ, ಕುಲಹಳ್ಳಿ, ಹಿಪ್ಪರಗಿ.ಮಹಾಲಿಂಗಪುರ, ಬುದ್ನಿ ಪಿ.ಡಿ, ಕೆಸರಕೊಪ್ಪ, ಬಿಸನಾಳ, ಸೈದಾಪುರ, ಢವಳೇಶ್ವರ, ನಂದಗಾಂವ, ಮದಬಾವಿ, ಮಾರಾಪುರ, ಸಂಗನಟ್ಟಿ.

ಇಳಕಲ್ ತಾ.ಪಂ:

ಕೇಸರಭಾವಿ, ಇಳಕಲ್, ಹಿರೇಹುಣಕುಂಟಿ, ಮಾಲಗಿಹಾಳ, ಚಿನ್ನಾಪುರ ಎಸ್.ಟಿ, ಚಟ್ನಿಹಾಳ, ಹಿರೇಶಿಂಗನಗುತ್ತಿ, ಚಿಕ್ಕನಶಿಂಗನಗುತ್ತಿ, ಕೃಷ್ಣಾಪುರ, ಹಿರೇಓತಗೇರಿ, ಚಿಕ್ಕೋತಗೇರಿ, ವಜ್ಜಲ, ಗೋನಾಳ ಎಸ್.ಟಿ, ತುಂಬಾ, ಜಂಬಲದಿನ್ನಿ, ಚಿಕ್ಕಆದಾಪುರ, ಹಿರೇಆದಾಪುರ, ಗಡಿಸುಂಕಾಪುರ, ನಂದವಾಡಗಿ, ಹರಿಣಾಪುರ, ಕಂದಗಲ್, ಮರಾಠಗೇರಿ, ಸೋಮಲಾಪುರ, ಗೋನಾಳ ಎಸ್.ಕೆ, ಗೊರಬಾಳ, ತೊಂಡಿಹಾಳ, ಹೆರೂರ, ಇಂಗಳಗಿ, ಗೊಪಾಸಾನಿ, ಬಲಕುಂದಿ, ಹಿರೇಉಪನಾಳ, ಸಂಕ್ಲಾಪುರ, ಗುಡೂರು ಎಸ್.ಬಿ, ಗೋನಾಳ ಎಸ್.ಬಿ, ಹನುಮನಾಳ ಎಸ್.ಟಿ, ಗುಗ್ಗಲಮರಿ, ಹಿರೆಕೊಡಗಲಿ, ಚಿಕ್ಕಕೊಡಗಲಿ, ನಿಡಸನೂರ, ಈಶ್ವರ ನಗರ, ಸೇವಾಲಾಲ ನಗರ, ಇಸ್ಲಾಂಪುರ, ಅಮರವಾಡಗಿ, ಚಿನ್ನಾಪುರ ಎಸ್.ಕೆ, ಪೋಚಾಪುರ, ಕೋಡಿಹಾಳ ಎಸ್.ಕೆ, ಕರಡಿ, ಪಲಟಿ, ಹೇಮವಾಡಗಿ, ತುರುಮರಿ, ತರಿವಾಳ, ಬೂದಿಹಾಳ ಎಸ್.ಕೆ, ಬೆನಕನದೋಣಿ, ಚಮಲಾಪುರ, ಕಂಬಳಿಹಾಳ, ಕೊಣ್ಣೂರ, ಉಪನಾಳ ಎಸ್.ಸಿ, ಭೀಮನಗಡ, ಚಿಕನಾಳ, ಗುಡೂರು ಎಸ್.ಸಿ, ಮುರಡಿ, ಗಾಣದಾಳ, ದಮ್ಮೂರು, ವಡಗೇರಿ, ಕ್ಯಾದಿಗೇರಿ, ಕುಣಿಬೆಂಚಿ, ಗೊರಜನಾಳ, ತಳ್ಳಿಕೇರಿ, ಕೇಲೂರ, ಚಿಲ್ಲಾಪುರ, ಬೆನಕನವಾರಿ, ಸಿದ್ದನಕೊಳ್ಳ,ಇಲಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.