ಬಾಗಲಕೋಟೆ: ನರೇಗಾ ಕಾಮಗಾರಿಯಲ್ಲಿ ಒಂದೇ ಫೋಟೊಕ್ಕೆ ಹಲವರು ಹೆಸರು ಹಾಕಿ, ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಮಂಟೂರು ಪಿಡಿಒ ರಾಜಶೇಖರ ವಿರುದ್ಧ ಹೈದರ್ ಪಟೇಲ್ ಎನ್ನುವವರು ಬಾಗಲಕೋಟೆ ಲೋಕಾಯುಕ್ತಕ್ಕೆ ಇತ್ತೀಚೆಗೆ ದೂರು ನೀಡಿದ್ದಾರೆ.
ಒಂಬತ್ತು ಜನರಿರುವ ಒಂದೇ ಫೋಟೊವನ್ನು 110 ಜನರಿಗೆ ಬಳಸಲಾಗಿದೆ. ಜಿಪಿಎಸ್ ತೋರಿಸುತ್ತಿಲ್ಲ. ಮೊಬೈಲ್‌ನಲ್ಲಿರುವ ಫೋಟೊವನ್ನೇ ಪದೇ ಪದೇ ಅಪ್‌ಲೋಡ್ ಮಾಡಿದ್ದಾರೆ. ₹30 ಲಕ್ಷಕ್ಕೂ ಹೆಚ್ಚು ಅವ್ಯವಹಾರವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಯಂತ್ರಗಳಿಂದ ಕೆಲಸ ಮಾಡಿ, ಕೂಲಿಕಾರ್ಮಿಕರಿಗೆ ಕೆಲಸ ನೀಡದೇ ಬಿಲ್ ಮಾಡಲಾಗಿದೆ. ಮಂಟೂರಿಗೆ ಪಿಡಿಒ ಆಗಿದ್ದಾಗ, ಇಂಗಳಗಿಗೆ ಇನ್‌ಚಾರ್ಜ್ ಆಗಿರುತ್ತಾರೆ. ಇಂಗಳಿಗೆ ಪಿಡಿಒ ಆಗಿದ್ದಾಗ ಮಂಟೂರಿಗೆ ಇನ್‌ಚಾರ್ಜ್ ಆಗಿರುತ್ತಾರೆ. 14 ವರ್ಷಗಳಿಂದ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ನಕಲಿ ಜಾಬ್‌ಕಾರ್ಡ್ ಹೆಸರಿನಲ್ಲಿ ಹಣ ಎತ್ತಲಾಗಿದೆ ಎಂದು ಆರೋಪಿಸಿದ್ದಾರೆ.
15ನೇ ಹಣಕಾಸಿನ ಯೋಜನೆಯಡಿಯೂ ಅವ್ಯವಹಾರ ಮಾಡಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಕೆಲಸಗಳನ್ನು ಟೆಂಡರ್ ಕರೆಯದೇ ಏಜೆನ್ಸಿಗಳ ಮೂಲಕ ಕೆಲಸ ಮಾಡಿಸಿರುತ್ತಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.