ADVERTISEMENT

ಬಾಗಲಕೋಟೆ | ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಪಾಕಿಸ್ತಾನ ಧ್ವಜ: ಬಂಧನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 15:57 IST
Last Updated 17 ಸೆಪ್ಟೆಂಬರ್ 2024, 15:57 IST
<div class="paragraphs"><p>ಬಂಧನ ( ಸಾಂಕೇತಿಕ ಚಿತ್ರ)</p></div>

ಬಂಧನ ( ಸಾಂಕೇತಿಕ ಚಿತ್ರ)

   

ಕಲಾದಗಿ: ಮೊಬೈಲ್‌ ಫೋನ್ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಪಾಕಿಸ್ತಾನ ಧ್ವಜದ ಚಿತ್ರ ಹಾಕಿಕೊಂಡ ಆರೋಪದ ಮೇಲೆ ಗ್ರಾಮದ ತೌಸೀಫ್ ಮೆಹತರ್ ಎಂಬುವನನ್ನು ಮಂಗಳವಾರ ಕಲಾದಗಿ ಪೊಲೀಸರು ಬಂಧಿಸಿದ್ದಾರೆ.

‘ಮೊಬೈಲ್‌ ವಾಟ್ಸ್‌ಆ್ಯಪ್‌ನಲ್ಲಿ ಪಾಕಿಸ್ತಾನದ ಧ್ವಜದ ಚಿತ್ರ ಹಾಕಿಕೊಂಡ ಬಗ್ಗೆ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯ ಮೇರೆಗೆ ತೌಸೀ‍ಫ್‌ಗೆ ಠಾಣೆಗೆ ಕರೆತಂದು ಮೊಬೈಲ್‌ ಪರಿಶೀಲಿಸಿದಾಗ, ಧ್ವಜದ ಚಿತ್ರ ಇರುವುದು ದೃಢಪಟ್ಟಿತು’ ಎಂದು ಕಲಾದಗಿ ಠಾಣೆಯ ಪಿಎಸ್‌ಐ ಚಂದ್ರಶೇಖರ್‌ ಹೆರಕಲ್ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.