ADVERTISEMENT

ಪೆಂಡಾಲ್ ಮಾಲೀಕರ ಸೇವೆ ಸ್ಮರಣೀಯ: ರಾಜಶೇಖರ ಶೀಲವಂತ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 4:40 IST
Last Updated 16 ಜುಲೈ 2025, 4:40 IST
ತಾಲ್ಲೂಕು ಪೆಂಡಾಲ್,ಲೈಟಿಂಗ್,ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಖಣದ ನಗರಿ ವೈಭವ-2025ರ ಶೀರ್ಷಿಕೆಯಲ್ಲಿ ತಾಲ್ಲೂಕು ಮಟ್ಟದ ಪೆಂಡಾಲ್ ಮಾಲಕರ ಸಮಾವೇಶವನ್ನು  ಭಾನುವಾರ ಮಾಜಿ ಶಾಸಕ ರಾಜಶೇಖರ ಶೀಲವಂತ ಉದ್ಘಾಟಿಸಿದರು. 
ತಾಲ್ಲೂಕು ಪೆಂಡಾಲ್,ಲೈಟಿಂಗ್,ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಖಣದ ನಗರಿ ವೈಭವ-2025ರ ಶೀರ್ಷಿಕೆಯಲ್ಲಿ ತಾಲ್ಲೂಕು ಮಟ್ಟದ ಪೆಂಡಾಲ್ ಮಾಲಕರ ಸಮಾವೇಶವನ್ನು  ಭಾನುವಾರ ಮಾಜಿ ಶಾಸಕ ರಾಜಶೇಖರ ಶೀಲವಂತ ಉದ್ಘಾಟಿಸಿದರು.    

ಗುಳೇದಗುಡ್ಡ: ಸಮಯಕ್ಕೆ ಅನುಸಾರ ಶಿಸ್ತಿನಿಂದ ಪೆಂಡಾಲ್ ಹಾಕುವ ಮೂಲಕ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಪೆಂಡಾಲ್ ಮಾಲೀಕರು ಕಾರಣಿಕರ್ತರಾಗಿರುವುದರಿಂದ ಪೆಂಡಾಲ್ ಮಾಲೀಕರ ಸೇವೆ ಸ್ಮರಣೀಯ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.

ಅವರು ಭಾನುವಾರ ಪೆಂಡಾಲ್,ಲೈಟಿಂಗ್, ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಖಣದ ನಗರಿ ವೈಭವ-2025ರ ಶೀರ್ಷಿಕೆಯಲ್ಲಿ ತಾಲ್ಲೂಕು ಮಟ್ಟದ ಪೆಂಡಾಲ್ ಮಾಲೀಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಸ್ತಿಗೆ ಮಹತ್ವವಿದೆ. ಯಾರು ಉತ್ತಮವಾದ ಆಕರ್ಷಿಣೀಯವಾದ ಸಮಾರಂಭ ಆರಂಭವಾಗುವ ಮುಂಚೆ ಎಲ್ಲ ಸಿದ್ಧತೆ ಮಾಡಿ ಯಶಸ್ವಿಗೆ ಕಾರಣವಾಗುವ ಪೆಂಡಾಲ್ ಮಾಲೀಕರಿಗೆ ಬೇಡಿಕೆ ಇದೆ. ಜೆಡಿಎಸ್ ಅಧ್ಯಕ್ಷ ಹನಮಂತ ಮಾವಿನಮರದ, ಮುಖಂಡ ಮಹಾಂತೇಶ ಮಮದಾಪೂರ ಮಾತನಾಡಿದರು.

ADVERTISEMENT

ತಾಲ್ಲೂಕು ಪೆಂಡಾಲ್, ಲೈಟಿಂಗ್, ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶರಣಬಸು ಕರನಂದಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮರಡಿಮಠದ ಕಾಶೀನಾಥ ಶ್ರೀ, ಕೋಟೆಕಲ್ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಶ್ರೀ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಸಂಘದ ಗೌರವಾಧ್ಯಕ್ಷ ಪ್ರಭು ತಟ್ಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ಕರೀಮ ಅತ್ತಾರ, ಡಾ.ನಾಗರಾಜ ಕುರಿ, ರಾಘು ಬಳಿಗಾರ, ಮೋಹನ ಕರನಂದಿ, ರಾಜು ಮನವಳ್ಳಿ, ಮಹೇಶ ಮೊಕಾಶಿ, ವೆಂಕಟೇಶ ಮಹೇಂದ್ರಕರ, ಮಂಜುನಾಥ ಭಗವತಿ, ಲಕ್ಷ್ಮಣ ಗಾಡದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.