ADVERTISEMENT

ಬಾಗಲಕೋಟೆ: ಗಸ್ತು ಮೋಟಾರ್ ಸೈಕಲ್‍ಗಳಿಗೆ ಶಾಸಕ ಮೇಟಿ ಚಾಲನೆ  

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 2:58 IST
Last Updated 31 ಆಗಸ್ಟ್ 2025, 2:58 IST
ಬಾಗಲಕೋಟೆಯಲ್ಲಿ ಶನಿವಾರ 10 ಗಸ್ತು ಮೋಟಾರ್ ಸೈಕಲ್‌ಗಳಿಗೆ ಶಾಸಕ ಎಚ್‌.ವೈ.ಮೇಟಿ ಚಾಲನೆ ನೀಡಿದರು
ಬಾಗಲಕೋಟೆಯಲ್ಲಿ ಶನಿವಾರ 10 ಗಸ್ತು ಮೋಟಾರ್ ಸೈಕಲ್‌ಗಳಿಗೆ ಶಾಸಕ ಎಚ್‌.ವೈ.ಮೇಟಿ ಚಾಲನೆ ನೀಡಿದರು   

ಬಾಗಲಕೋಟೆ: ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರಾತ್ರಿ ಗಸ್ತು ಕರ್ತವ್ಯಕ್ಕಾಗಿ ಪೊಲೀಸ್ ಇಲಾಖೆಗೆ ನೀಡಲಾದ 10 ಗಸ್ತು ಮೋಟಾರ್ ಸೈಕಲ್‍ಗಳಿಗೆ ಶಾಸಕ ಎಚ್.ವೈ. ಮೇಟಿ ಶನಿವಾರ ಚಾಲನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾತ್ರಿ ಗಸ್ತು ಹಾಗೂ ಸಾರ್ವಜನಿಕರ ತುರ್ತು ಸೇವೆಗಾಗಿ ಅನುಕೂಲವಾಗುವ ದೃಷ್ಟಿಯಿಂದ ಸ್ಥಳೀಯ ಅಭಿವೃದ್ದಿ ಅನುದಾನದಡಿ  ಮೋಟಾರ್ ಸೈಕಲ್‍ಗಳನ್ನು ನೀಡಲಾಗಿದೆ ಎಂದರು.

ಇವುಗಳ ಸದುಪಯೋಗವಾಗಬೇಕು. ಈ ಹಿಂದೆ ತುರ್ತು ಸೇವೆಗಾಗಿ 3 ಬುಲೆರೊ ಜೀಪುಗಳನ್ನು ಪೊಲೀಸ್ ಇಲಾಖೆಗೆ  ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಡಿಎಸ್‍ಪಿ ಪ್ರಭು ಪಾಟೀಲ, ಸದಾಶಿವ ವನಂಜಕರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಎಸ್.ಎನ್.ರಾಂಪೂರ, ದ್ಯಾಮಣ್ಣ ಗಾಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.